Please enable JavaScript.
Coggle requires JavaScript to display documents.
ಪ್ರಕೃತ್ಯಧಿಕರಣಮ್ (ಸಿದ್ಧಾಂತ - ಪರಬ್ರಹ್ಮನೇ ಉಪಾದಾನ-ನಿಮಿತ್ತ ಕಾರಣವೆರಡೂ (ಸೂ 1.4.23…
ಪ್ರಕೃತ್ಯಧಿಕರಣಮ್
ಸಿದ್ಧಾಂತ - ಪರಬ್ರಹ್ಮನೇ ಉಪಾದಾನ-ನಿಮಿತ್ತ ಕಾರಣವೆರಡೂ
ಸೂ 1.4.23
ಯೇನಾಶ್ರುತಂ ಶ್ರುತಂ
ಎಂದು (ಛಾಂ. 6.1.3) ಬ್ರಹ್ಮವಿಜ್ಞಾನದಿಂದ ಸರ್ವವಿಜ್ಞಾನವು ಎಂಬ ಪ್ರತಿಜ್ಞಾ ವಾಕ್ಯಕ್ಕೂ
ಮತ್ತು ಘಟ ದೃಷ್ಟಾಂತಗಳಿಗೂ ತೊಂದರೆ ಬಾರದೇ ಇರುವುದಕ್ಕಾಗಿ ನಿಮಿತ್ತ ಮತ್ತು ಉಪಾದಾನ ಕಾರಣನು ಎರಡೂ ಪರಬ್ರಹ್ಮನೇ ಸರಿ
ಪರಬ್ರಹ್ಮನು ನಿಮಿತ್ತಮಾತ್ರವೆಂದರೆ
ನಿಮಿತ್ತನಾದ ಕುಲಾಲ ವಿಜ್ಞಾನದಿಂದ ಘಟ ವಿಜ್ಞಾನವು ಹೇಗೆ ಗೊತ್ತಾಗುವುದಿಲ್ಲವೋ
ಹಾಗೆ ಪರಬ್ರಹ್ಮ ಜ್ಞಾನದಿಂದ ಜಗತ್ತಿನ ಜ್ಞಾನವು ಉಂಟಾಗುವುದಿಲ್ಲವು
ಪರಬ್ರಹ್ಮ ಉಪಾದಾನ ಕಾರಣವೂ ಹೌದು ಎಂದರೆ
ಆಗ ಮೃತ್ತಿನ ಜ್ಞಾನದಿಂದ ಘಟಜ್ಞಾನ ಉಂಟಾಗುವ ಹಾಗೆ ಜಗತ್ತಿನ ಜ್ಞಾನವೂ ಉಂಟಾಗುತ್ತದೆ.
ಚಿದಚಿದ್ವಸ್ತು ಶರೀರಕನಾದ ಪರಬ್ರಹ್ಮನು ಜಗತ್ತಿಗೆ ಉಪಾದಾನ ಕಾರಣನಾದರೂ ಚಿದಚಿದ್ವಸ್ತುಗಳು ಮಾತ್ರವೇ ವಿಕಾರವನ್ನು ಹೊಂದುತ್ತವೆಯೇ ವಿನಾ ಈಶ್ವರನಿಗೆ ವಿಕಾರತ್ವವಿಲ್ಲವೆಂದೇ ತೋರಿಬರುತ್ತದೆ.
ಸೂ 1.4.24
ಪರಬ್ರಹ್ಮನು ತಾನೇ ಬಹುವಾಗಿ ಆಗುವೆನೆಂದು ಸಂಕಲ್ಪಿಸಿದನು
ತದೈಕ್ಷತ ಬಹುಸ್ಯಾಂ ಪ್ರಜಾಯೇಯ
ಹೀಗೆ ಪರಬ್ರಹ್ಮ ಸಂಕಲ್ಪವೆಂದು ಉಪದೇಶಿಸಿರುವುದರಿಂದ
ಸೂ 1.4.25
ಸಾಕ್ಷಾತ್ತಾಗಿಯೇ ನಿಮಿತ್ತ ಉಪಾದಾನಕಾರಣಗಳೆರಡೂ ಆತನೇ ಎಂದು ಶ್ರುತಿಯಲ್ಲಿ ಹೇಳಿರುವುದರಿಂದ
ಬ್ರಹ್ಮವನಂ ಬ್ರಹ್ಮಸವೃಕ್ಷ ಆಸೀತ್
ಯಥೋರ್ಣನಾಭಿಸ್ಸೃಜತೇ ಘೃಹ್ಣತೇಚ್ಚ
ಸೂ1.4.26
ಸೃಶ್ಟಿಕರ್ತಾವಾದ ತಾನೇ ಜಗದಾಕಾರರೂಪನಾಗಿ ಆಗುವೆನೆಂದು ಶ್ರುತಿಯು ಹೇಳಿರುವುದರಿಂದಲೂ ಪರಬ್ರಹ್ಮವು ಉಪಾದಾನಕಾರಣನು
ಅಕೃತೇ ತದಾತ್ಮಾನಂ ಸ್ವಯಮ್ ಅಕುರತ
(ತೈ. ಆನಂದ 7.1)
ಸೂ 1.4.27
ಸೂಕ್ಷ್ಮ ಚಿದಚಿದ್ವಿಶಿಷ್ಟನಾದ ಪರಬ್ರಹ್ಮನು ಸೃಷ್ಟಿ ದೆಶೆಯಲ್ಲಿ ಸ್ಥೊಲ ಚಿದಚಿದ್ವಿಶಿಷ್ಟ ಪರಬ್ರಹ್ಮವಾಗಿ ಪರಿಣಾಮಿಸುತ್ತಾನೆ.
ಆಗ ಪರಿಣಾಮಗಳು ಚಿದಚಿತ್ತುಗಳಿಗೆ ಮಾತ್ರವೇ ಸಂಬಂಧಿಸುತ್ತವೆ.
ತನಗೆ ಯಾವ ಪರಿಣಾಮಗಳೂ ಅಂಟುವುದಿಲ್ಲವು
1.4.28 ಶಬ್ದವು ವ್ಯಕ್ತವಾಗಿ ಉಪಾದಾನ ಕಾರಣನೂ ಪರಮಾತ್ಮನೆಂದು ಹೇಳುತ್ತದೆ.
ಕರ್ತಾರಮ್ ಈಶಂ ಬ್ರಹ್ಮಯೋನಿಂ
(ಮುಂ 1.3.4)
ಸೂತ್ರಗಳು - 1.4.23 - 1.4.28
1.4.23 ಪ್ರಕೃತಿಶ್ಚ ಪ್ರತಿಜ್ಞಾ ದೃಷ್ಟಾಂತಾನುಪರೋಧಾತ್
1.4.24 ಅಭಿಧ್ಯೋಪದೇಶಾತ್
1.4.25 ಸಾಕ್ಷಾತ್ ಚ ಉಭಯಾಮ್ನಾನಾತ್
1.4.26 ಆತ್ಮಕೃತೇಃ
1.4.27 ಪರಿಣಾಮಾತ್
1.4.28 ಯೋನಿಶ್ಚಹಿಗೀಯತೇ
ಪೂರ್ವಪಕ್ಷ - ಬ್ರಹ್ಮ ನಿಮಿತ್ತಕಾರಣ ಮಾತ್ರ
ರಾಜಾರಾಷ್ಟ್ರಂ
ಎಂದು ಹೇಳುವ ಸಮಾನಾಧಿಕರಣ್ಯದ ಹಾಗೆ
ರಾಜಾ ಹೇಗೆ ರಾಷ್ಟ್ರಕ್ಕೆ ಆಜ್ಞಾಪಿಸುವನಾಗಿ ನಿಮಿತ್ತಕಾರಣ ಮಾತ್ರವೇ, ಉಪಾದಾನ ಕಾರಣನಲ್ಲವೋ
ಹಾಗೆ, ಗಡಿಗೆ ನಿರ್ಮಾಣದಲ್ಲಿ ಕುಲಾಲನು ನಿಮಿತ್ತ ಕಾರಣನು, ಮೃತ್ತು ಉಪಾದಾನ ಕಾರಣವು
ಹೀಗೆ ಎರಡೂ ಬೀಧವೇ ತೋರುತ್ತದೆ
ಉಪಾದಾನ ಕಾರಣ ಹೇಳಿದರೆ ಅವಿಕಾರ ಶ್ರುತಿಗೆ ವಿರೋಧವು
ನಾಮರೂಪಗಳಿಗೆ ಅನರ್ಹನಾಗಿ, ಸೃಷ್ಟಿಗೆ ಮೊದಲು ಇದ್ದವನು, ಈಗ ನಾಮರೂಪಗಳಿಗೆ ಅರ್ಹನಾಗಿ ಕಾರ್ಯವಾಗಿ
ಹೀಗೆ ಕಾರಣ ಕಾರ್ಯಗಳು ಒಂದೇಯಾಗಿರುವುದು ನ್ಯಾಯವೋ ?
ಸಂಶಯ
ಪರಬ್ರಹ್ಮನು ನಿಮಿತ್ತಕಾರಣಮಾತ್ರವೇ ?
ಅಥವಾ ನಿಮಿತ್ತ-ಉಪಾದಾನ ಕಾರಣಗಳೆರಡೂ ಬ್ರಹ್ಮನೇ ?