Please enable JavaScript.
Coggle requires JavaScript to display documents.
ಆನುಮಾನಿಕಾಧಿಕರಣಮ್ (ಸೂತ್ರಗಳು 1.4.1 - 1.4.7 (1.4.1 ಆನುಮಾನಿಕಮಪ್ಯೇ…
ಆನುಮಾನಿಕಾಧಿಕರಣಮ್
ಸೂತ್ರಗಳು 1.4.1 - 1.4.7
1.4.1 ಆನುಮಾನಿಕಮಪ್ಯೇ ಕೇಷಾಮಿತಿಚೇನ್ನ ಶರೀರ ರೂಪಕ ವಿನ್ಯಸ್ತ ಗೃಹೀತೇರ್ದರ್ಶಯತಿ ಚ
1.4.2 ಸೂಕ್ಷ್ಮಂತು ತದರ್ಹತ್ವಾತ್
1.4.3 ತದಧೀನತ್ವಾದರ್ಥವತ್
1.4.4 ಜ್ಞೆಯತ್ವಾವಚನಾಚ್ಚ
1.4.5 ವದತೀತಿ ಚೇನ್ನ ಪ್ರಾಜ್ಞೋಹಿ ಪ್ರಕರಣಾತ್
1.4.6 ತ್ರಯಾಣಾಮೇವ ಚೈವಂ ಉಪನ್ಯಾಸಃ ಪ್ರಶ್ನಶ್ಚ
1.4.7 ಮಹದ್ವಚ್ಚ
ಸಿದ್ಧಾಂತ - ಅವ್ಯಕ್ತ ಶಬ್ದದಿಂದ ಶರೀರವು ಹೇಳಲ್ಪಟ್ಟಿರುತ್ತದೆ.
ಸೂ. 1.4.1
ಅವ್ಯಕ್ತ
ಶಬ್ದದಿಂದ ಹೇಳಿದುದು ಜಗತ್ತಿಗೆ ಕಾರಣಭೂತವಾದ ಪ್ರಧಾನವು ಸರಿಯಲ್ಲವು
ಹಿಂದಿನ ಶ್ರುತಿವಾಕ್ಯದಲ್ಲಿ
ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವಚ...
ಎಂದು ಹೇಳಲ್ಪಟ್ಟು, ಉಪಾಸನವು ಸಿದ್ಧಿಸುವುದಕ್ಕೆ ಇಂದ್ರಿಯಾದಿಗಳನ್ನು ವಶದಲ್ಲಿಡುವುದಕ್ಕಾಗಿ -
ಆತ್ಮಾ, ಶರೀರ, ಬುದ್ಧಿ, ಮನಸ್ಸು, ಇಂದ್ರಿಯಗಳನ್ನು ರಥದಲ್ಲಿ ಕೂತವನು, ರಥ, ಸಾರಥಿ, ಲಗಾಮು, ಕುದುರೆಗಳು, ಅವು ಸಂಚರಿಸುವ ಮಾರ್ಗಗಳೆಂದು ರೂಪಕ ಮಾಡಿ ಹೇಳಿ,
ಅದಕ್ಕಿಂತ ಲಗಾಮು, ಲಗಾಮಿಗಿಂತ ಸಾರಥಿ, ಹೀಗೆ ಹೇಳುತ್ತಾ ಹೋಗಿರುತ್ತದೆ.
ರಥವೆಂದು ರೂಪಕ ಮಾಡಲ್ಪಟ್ಟ ಶರೀರದ ಸ್ಥಾನದಲ್ಲಿ
ಅವ್ಯಕ್ತ
ಶಬ್ದವಿದ್ದರೆ, ಅವ್ಯಕ್ತವೆಂದರೆ ಶರೀರವೆಂದೇ ಅರ್ಥ ಮಾಡಿಯೇ ತೀರಬೇಕಲ್ಲವೇ ?
ಆದುದರಿಂದ
ಬುದ್ಧೇರಾತ್ಮಾ ಮಹಾನ್ ಪರಃ
ಎಂದು ಹೇಳಿ
ಅಲ್ಲಿಂದ
ಮಹತಃ ಪರಮವ್ಯಕ್ತಂ
ಎಂಬಲ್ಲಿ ಅವ್ಯಕ್ತ ಶಬ್ದದಿಂದ ಶರೀರವೇ ಹೇಳಲ್ಪಟ್ಟಿತು
ಅಲ್ಲಿಂದ ಮುಂದಕ್ಕೆ
ಅವ್ಯಕ್ತಾತ್ಪುರುಷಃ ಪರಃ
ಎಂಬಲ್ಲಿ ಪುರುಷ ಶಬ್ದವು ಜೀವಾತ್ಮನನ್ನು ಹೇಳಲಿಲ್ಲವು
ಏಕೆಂದರೆ ಜೀವಾತ್ಮನು ರಥಿ ಎಂದು ಹಿಂದೆಯೆ ರೂಪಕ ಮಾಡಿ ಹೇಳಿರುವುದರಿಂದ
ಇಲ್ಲಿ ಪುರುಷನು ಸರ್ವಾಂತರ್ಯಾಮಿಯಾದ ಪರಮ ಪುರುಷನು
ಆದುದರಿಂದಲೇ
ಪುರುಷಾನ್ನಪರಂ ಕಿಂಚಿತ್
ಎಂಬುದರಿಂದ ಪರಮ ಪುರುಷನಿಗಿಂತ ಶ್ರೇಷ್ಠವಾದುದಿಲ್ಲವೆಂದು ಹೇಳಿ ಶ್ರುತಿಯು ಮುಗಿಸಿತು.
ಅವುಗಳನ್ನು ವಶಮಾಡಿಕೊಳ್ಳುವ ಸಂದರ್ಭದಲ್ಲಿ ವಿಷಯಗಳಿಗಿಂತ ಇಂದ್ರಿಯಗಳು ಉತ್ತಮವೆಂದೂ
2
ಸೂ 1.4.2
ಕಣ್ಣಿಗೆ ಕಾಣದಿರುವ ಕಾರ್ಯಾವಸ್ಥಾಂತರವಾದ ಶರೀರವಾಗಲು ಯೋಗ್ಯತೆ ಇರುವುದರಿಂದ
ಕಾರಣಾವಸ್ಥೆಯಲ್ಲಿ ಅವ್ಯಕ್ತವಾಗಿದ್ದುದು ವ್ಯಕ್ತವಾದ ಶರೀರವಾಗುತ್ತದೆಂಬ ಭಾವವು
ಕಾರಣ ಕಾರ್ಯಗಳಿಗೆ ಅನನ್ಯತ್ವವು ಸಿದ್ಧವು
ಪೃಥಿವಿಯಲ್ಲಿರುವ ಚಿತ್ತಚಿತ್ತುಗಳಿಗೂ ಆ ಕಾರಣದಿಂದ ಶರೀರ, ಆತ್ಮಾಗಳಿಗೂ ಪರಮ ಪುರುಷನು ಅಂತರ್ಯಾಮಿಯಾಗಿ ಇರುವುದರಿಂದ
ಎಲ್ಲವೂ ಆತನಿಗೆ ಅಧೀನವಾಗಿ,
ಆತನನ್ನು ವಶಮಾಡಿಕೊಂಡರೆ ಒಳ್ಳೇದೆಂದು ತಿಳಿಸುವುದಕ್ಕಾಗಿ
ಅವ್ಯಕ್ತಾತ್ ಪುರುಶಃ
ಎಂದು ಹೇಳಿ,
ಇನ್ನು ಪರಮ ಪುರುಷನಿಗಿಂತ ಶ್ರೇಷ್ಠವಾಗಿ ವಶೀಕರಣಕ್ಕೆ ಇನ್ನು ಯಾವುದೂ ಇಲ್ಲವೆಂದೂ ಹೇಳಿ,
ಅವನೇ ಸಿದ್ಧೋಪಾಯನಾಗಿ ಉಪಾಸನ ನಿರ್ವಾಹಕ್ಕೆ ಮುಖ್ಯನೆಂದು
ಸಾಕಾಷ್ಠಾ
ಎಂದೂ ಹೇಳಿ,
ಆತನಿಂದಲೇ ಮೋಕ್ಶವೆಂದು
ಸಾಪರಾಗತಿಃ
ಎಂದು ಸ್ಥಾಪಿಸಿ,
ಹೀಗೆ ಸರ್ವವೊ
ತದಧೀನವಾದುದರಿಂದಲೇ
ರೂಪಕೋಪನ್ಯಾಸವು ಪ್ರಯೋಜನವುಳ್ಳದ್ದಾಯಿತು ಎಂಬರ್ಥವು
ಆದುದರಿಂದ
ಅವ್ಯಕ್ತವು
ಸಾಂಖ್ಯನು ಹೇಳುವ ಹಾಗೆ ಅಬ್ರಹ್ಮಾತ್ಮಕ ಪ್ರಧಾನ ವಲ್ಲವು.
ಭೂತ ಸೂಕ್ಷ್ಮವೆನಿಸುವ ಅವ್ಯಾಕೃತವು ಪರಮಪುರುಷನಿಂದ ಅಂತರ್ಯಾಮಿಯಾಗಿರುವುದೇ.
ಅವ್ಯಕ್ತ ಶಬ್ದದಿಂದಿರುವುದೇ ಮುಂದೆ ಶರೀರವಾಗುತ್ತದೆ.
ಪ್ರಕೃತಿರ್ಯಾಮಯಾಖ್ಯಾತಾ ವ್ಯಕ್ತಾವ್ಯಕ್ತಸ್ವರೂಪಿಣೀ | ಪುರುಷಶ್ಚಾಪ್ಯುಭಾವೇತೌಲೀಯೇತೇ ಪರಮಾತ್ಮನಿ
(ವಿ.ಪು.6.4.39) ಎಂಬುದು ಅನುಸಂಧೇಯವು
ಜಡ ಪ್ರಕೃತಿ ಎಂದು ಯಾವುದು ನನ್ನಿಂದ ಹೇಳಲ್ಪಟ್ಟಿತೋ ಅದೂ, ಮತ್ತು ಅಜಡವಾದ ಚಿತ್ತೆಂಬ ಪರಾ ಪ್ರಕೃತಿ ಎಂಬುದೂ ಇವೆರಡೂ ವ್ಯಕ್ತಾವ್ಯಕ್ತಗಳಾಗಿ ಇದ್ದುಕೊಂಡು ಪರಮಾತ್ಮನಲ್ಲಿ ಲೀನವಾಗುತ್ತವೆ ಎಂದು ವಿಷ್ಣುಪುರಾಣವು ತತ್ವತ್ರಯವನ್ನು ಬೋಧಿಸುತ್ತದೆ.
ಸೂ 1.4.4
ಅವ್ಯಕ್ತ ಶಬ್ದದಿಂದ ಜಗತ್ತಿಗೆ ಕಾರಣ ಭೂತ ಪ್ರಧಾನವು ಹೇಳಲ್ಪಟ್ಟಿಡ್ಡರೆ, ಅವ್ಯಕ್ತಕ್ಕೆ ಜ್ಞೇಯತ್ವವನ್ನು ಹೇಳಬೇಕಾಗಿತ್ತು.
ವ್ಯಕ್ತಾವ್ಯಕ್ತಜ್ಞ ವಿಜ್ಜಾನಾತ್
ವ್ಯಕ್ತಾವ್ಯಕ್ತವನ್ನು ತಿಳಿಯುವ ಜ್ಞಾನದಿಂದ ಮೋಕ್ಷವೆಂದು ಸಾಂಖ್ಯರು ಹೇಳಿರುವುದರಿಂದ ಅವ್ಯಕ್ತಕ್ಕೆ ಜ್ಞೆಯತ್ವವು ಶ್ರುತಿಯಲ್ಲಿ ಹೇಳಬೇಕಾಗಿತ್ತು.
ಹಾಗೆ ಜ್ಞೇಯತ್ವವು ಹೇಳಲ್ಪಡದೇ ಇರುವುದರಿಂದ ಅವ್ಯಕ್ತವು ಸಾಂಖ್ಯೋಕ್ತ ಪ್ರಧಾನವಲ್ಲವು.
ಸೂ 1.4.5
ಅಶಬ್ದಮಸ್ಪರ್ಶಮ್
ಇವೇ ಮೊದಲಾದವುಗಳಿಂದ ಪರಮ ಪುರುಷನಷ್ಟೇ ಇಲ್ಲಿ ಪ್ರಕರಣಾನುಗುಣವಾಗಿ ಹೇಳಲ್ಪಟ್ಟಿದೆ.
ಪ್ರಕರಣವು ಯಾವುದೆಂದರೆ, ಈ ಪ್ರಾಜ್ಞನಾದ ಪುರುಷೋತ್ತಮನನ್ನು ಉಪಾಸನ ಮೂಲಕ ಹೊಂದುವ ಕ್ರಮವು
ಸೂ 1.4.6
ಪ್ರಕರಣವು ನಚಿಕೇತುವಿನ ಪ್ರಶ್ನವೂ ಅದರ ಉಪನ್ಯಾಸವೂ ಸಹ
ಮೂರರ ವಿಷಯವಾದುದು -
ಮೋಕ್ಷಕ್ಕೆ ಉಪಾಯವು ಉಪಾಸನವು
ಉಪೇಯನು ಪರಮ ಪುರುಷನು
ಉಪಾಸಿಸುವನು
ತಿಳಿಯತ್ತಕ್ಕದ್ದು (ಜ್ಞೇಯತ್ವವು) ಈ ಮೂರು, ಆದುದರಿಂದ ಯಮನಿಂದ ಆ ಮೂರರ ಉಪನ್ಯಾಸವು.
ನಚಿಕೇತನ ಪ್ರಶ್ನೆಯೂ ಸಹ, ಅಬ್ರಹ್ಮಾತ್ಮಕ ಪ್ರಧಾನವು ಜಗತ್ಕಾರಣವೆಂದು ಹೇಳಲಿಲ್ಲವು
ಅಶಬ್ದಾದಿಗಳು ಆ ಪ್ರಾಜ್ಞನಾದ ಪರಮ ಪುರುಷನ ಧರ್ಮಗಳು
ಸೂ 1.4.7
ಬುದ್ಧೇರಾತ್ಮಾ ಮಹಾನ್ ಪರಃ
ಎಂಬುದಾಗಿ ಆತ್ಮ ಶಬ್ದಕ್ಕೆ ಸಾಮಾನಾಧಿಕರಣ್ಯದಿಂದ ಹೇಳಿರುವುದರಿಂದ
ಮಹತ್
ಶಬ್ದವು ಸಾಂಖ್ಯಪ್ಪ್ರಕ್ರಿಯೆಯ ಪ್ರಕಾರ ಮಹತ್ ಶಬ್ದವನ್ನು ಹೇಗೆ ಬೋಧಿಸಲಾರದೋ,
ಹಾಗೆಯೇ
ಅವ್ಯಕ್ತಾತ್ ಪುರುಷಃ ಪರಃ
ಎಂಬಲ್ಲೂ ಸಾಂಖ್ಯನ ಪ್ರಧಾನವು ಅವ್ಯಕ್ತ ಶಬ್ದದಿಂದ ಹೇಳಲ್ಪಡಲಿಲ್ಲವು
ಪೂರ್ವಪಕ್ಷ - ಅವ್ಯಕ್ತ ಶಬ್ದದಿಂದ ಹೇಳಲ್ಪಟ್ಟಿರುವುದು ಪ್ರಧಾನ
ಏಕೆಂದರೆ
ಮಹತಃ ಪರಮವ್ಯಕ್ತಂ | ಅವ್ಯಕ್ತಾತ್ಪುರುಷಃ ಪರಃ |
ಮಹತ್ತಿಗಿಂತ ಅವ್ಯಕ್ತವು ಜಗತ್ಕಾರಣವೆಂದೂ
ಅದಕ್ಕಿಂತ 25ನೆಯ ತತ್ವವಾದ ಜೀವಾತ್ಮನು ಶ್ರೇಷ್ಠವೆಂದು ಹೇಳಿರುವುದರಿಂದ
ಅವ್ಯಕ್ತವೆಂದರೆ ವ್ಯಕ್ತವಲ್ಲದ್ದು, ಗೋಚರವಲ್ಲದುದು; ಶರೀರವು ವ್ಯಕ್ತವಾದುದು.
ಅವ್ಯಕ್ತವು ಶರೀರವನ್ನು ಹೇಗೆ ಬೋಧಿಸೀತು ?
ಮುಂದಕ್ಕೆ
ಅವ್ಯಕ್ತಾತ್ ಪುರುಷಃ ಪರಃ ಪುರುಷಾತ್ ನ ಪರಂ ಕಿಂಚಿತ್
ಎಂದು ಈ ವಶೀಕರಣ ಪ್ರಕರಣದಲ್ಲಿ ಹೇಳುವುದರ ಪ್ರಯೋಜನವೇನೂ ಕಾಣುವುದಿಲ್ಲ
ಪ್ರಧಾನಕ್ಕೆ ಜ್ಞೇಯತ್ವವನ್ನು ಹೇಳಿದೆಯಲ್ಲಾ -
ಅಶಬ್ದಮಸ್ಪರ್ಶರೂಪಮ್ ಅವ್ಯಯಂ ತಥಾರಸಂ ನಿತ್ಯಮ್ ಅಗನ್ದವಚ್ಚಯತ್ |
ಅನಾದ್ಯನನ್ತಂ ಮಹತಃ ಪರಂ ಧ್ರುವಂ ನಿಚಾಯ್ಯತಂ ಮೃತ್ಯುಮುಖಾತ್ ಪ್ರಮುಚ್ಯತೇ |
(ಕಠ 1.3.15)
ನಿಚಾಯ್ಯತಂ
ಎಂದರೆ ವಿಷಯೀಕರಿಸಿ ದೃಷ್ಟ್ವಾ ಎಂದು ಇದೆಯಲ್ಲಾ
ಆದುದರಿಂದ ಜಗತ್ಕಾರಣಭೂತ ಅವ್ಯಕ್ತ ವೆಂದರೆ ಪ್ರಧಾನಕ್ಕೆ ಜ್ಞೇಯತ್ವವು ಉಂಟು
ವಿಷಯ
ಕಠವಲ್ಲಿಯಲ್ಲಿ (1.3.10.11)
ಮಹತಃ ಪರಮವ್ಯಕ್ತಂ | ಅವ್ಯಕ್ತಾತ್ಪುರುಷಃ ಪರಃ | ಪುರುಷಾನ್ನ ಪರಃ ಕಿಂಚಿತ್ಸಾಕಾಷ್ಠಾ ಸಾಪರಾಗತಿಃ ||
ಸಂಶಯ
ಇಲ್ಲಿ
ಅವ್ಯಕ್ತ
ಶಬ್ದದಿಂದ ಹೇಳಲ್ಪಟ್ಟಿರುವುದು ಸಾಂಖ್ಯರು ಜಗತ್ಕಾರಣವೆಂದು ಹೇಳುವ
ಪ್ರಧಾನವೇ
ಅಲ್ಲವೇ ?