Please enable JavaScript.
Coggle requires JavaScript to display documents.
ಅರ್ಥಾಂತರತ್ವಾದಿ ವ್ಯಪದೇಶಾಧಿಕರಣಮ್ (ಸಿದ್ಧಾಂತ - ಪರಮಾತ್ಮನು (ಸೂ 1.3.44…
ಅರ್ಥಾಂತರತ್ವಾದಿ ವ್ಯಪದೇಶಾಧಿಕರಣಮ್
ಸೂತ್ರಗಳು 1.3.42 - 1.3.44
1.3.42 ಆಕಾಶೂಽರ್ಥಾನ್ತರತ್ವಾದಿ ವ್ಯಪದೇಶಾತ್
1.3.43 ಸುಷುಪ್ತ್ಯುತ್ಕ್ರಾನ್ತ್ಯೋರ್ಭೇದೇನ
1.3.44 ಪತ್ಯಾದಿ ಶಬ್ದೇಭ್ಯಃ
ವಿಷಯ
ಛಾಂ. 8.14.1 ರಲ್ಲಿ
ಆಕಾಶೋಹವೈ ನಾಮರೂಪಯೋನಿರ್ವಹಿತಾ, ತೇಯದನ್ತರಾ ತದ್ಬ್ರಹ್ಮ ತದಮೃತಂ ಸ ಆತ್ಮಾ
ಸಂಶಯ
ಈ ಆಕಾಶ ಶಬ್ದವಾಚ್ಯನು
ಪರಬ್ರಹ್ಮವೇ ?
ಅಥವಾ ಮುಕ್ತಾತ್ಮನೇ?
ಪೂರ್ವಪಕ್ಷ - ಮುಕ್ತನು
ಮುಕ್ತನು
ಅಶ್ವ ಇವ ರೋಮಾಣಿ ವಿಧೂಯ ಪಾಪಂ ರಾಹೋರ್ಮುಖಾತ್ಪ್ರಮುಚ್ಯ ಧೂತ್ಮಾ ಶರೀರಮ್ ಅಕೃತಂ ಕೃತಾತ್ಮಾ ಬ್ರಹ್ಮಲೋಕಮ್ ಅಭಿಸಂಭವಾನಿ
ಕುದುರೆಯು ತನ್ನ ರೋಮಗಳನ್ನು ಕೊಡವಿಕೊಳ್ಳುವ ತೆರದಿ ಪಾಪಗಳಿಂದ ಬಿಡಲ್ಪಟ್ಟವನಾಗಿ
ರಾಹುವಿನ ಮುಖದಿಂದ ಬಿಡಲ್ಪಟ್ಟ ಚಂದ್ರನೋಪಾದಿಯಲ್ಲಿ ಹೇಯ ಶರೀರವನ್ನು ಕೊಡವಿಕೊಂಡವನಾಗಿ,
ಕೃತಕೃತ್ಯನಾಗಿ ಶಾಶ್ವತವಾದ ಬ್ರಹ್ಮಲೋಕವನ್ನು ಹೊಂದುವನೆಂದು ಹೇಳಿರುವುದರಿಂದ ಮುಕ್ತಾತ್ಮನು ಇಲ್ಲಿ ಹೇಳಲ್ಪಟ್ಟ ಹಾಗೆ ತೋರುತ್ತದೆ
ಆ ಮುಕ್ತಾತ್ಮನೇ ಹಿಂದೆ ಬದ್ಧನಾಗಿ ನಾಮರೂಪಗಳ ನಿರ್ವಾಹಕನಾಗಿದ್ದನು
ಜ್ಞಾನ ಸಂಕುಚಿತ ದೆಶೆಯು ಕಳೆದು ಹೋಗಿ ಪ್ರಕಾಶಾವಸ್ಥೆಯು ಪ್ರಾಪ್ತವಾದುದರಿಂದ ಆತನು ಆಕಾಶಶಬ್ದವಾಚ್ಯನು
ಜೀವನಿಗಿಂತ ಪರಮಾತ್ಮನು ಬೇರೆ ಎಂಬ ಭಾವವನ್ನು ಇಟ್ಟುಕೊಂಡು ಆಕಾಶ ಶಬ್ದವಾಚ್ಯನು ಮುಕ್ತನಲ್ಲವೆಂದು ಸಾಧಿಸಿದರೆ,
ತತ್ತ್ವಮಸಿ
ಎಂಬಲ್ಲಿ ಜೀವಾತ್ಮ ಪರಮಾತ್ಮೈಕ್ಯತ್ವ ತೋರುವುದಿಲ್ಲವೇ ?
ನೇಹ ನಾನಾಸ್ತಿ ಕಿಂಚನ
ಎಂಬಲ್ಲಿ ಭೇದವೇ ನಿಷೇಧಿಸಲ್ಪಟ್ಟಿದೆಯೆಲ್ಲಾ
ಸಿದ್ಧಾಂತ - ಪರಮಾತ್ಮನು
ಸೂ 1.3.42
ಮುಕ್ತಾತ್ಮನಿಗಿಂತ ಬೇರೆಯಾಗಿರುವ ಧರ್ಮಗಳೇ ಮೊದಲಾದವುಗಳು ಶ್ರುತಿಯಲ್ಲಿ ಹೇಳಿರುವುದರಿಂದ ಆಕಾಶ ಶಬ್ದವಾಚ್ಯನು ಪರಮಾತ್ಮನೇ
ಪುರುಷಸೂಕ್ತದಲ್ಲಿ
ಸರ್ವಾಣಿ ರೂಪಾಣಿ ವಿಚಿತ್ಯಧೀರಃ ನಾಮಾನಿಕೃತ್ವಾ ಅಭಿವದನ್ಯ ದಾಸ್ತೇ
ಪರಬ್ರಹ್ಮವೇ ನಾಮರೂಪ ಕರ್ತಾವೆಂದು ಹೇಳಿರುತ್ತದೆ
ಜೀವಾತ್ಮನಿಗೂ ಅಚಿತ್ತಿನ ಸಂಬಂಧದ ಮೂಲಕ ಪರಬ್ರಹ್ಮನು ನಾಮರೂಪಗಳನ್ನು ಉಂಟುಮಾಡುವನೆಂದು ಹೇಳಿಕೊಂಡಿರುವುದರಿಂದ
ಜೀವಾತ್ಮನು ನಾಮರೂಪ ಕರ್ತಾ ವಲ್ಲವು
ಆ ನಾಮರೂಪಗಳನ್ನು ಹೊಂದಿದವನು
ನಾಮರೂಪಗಳನ್ನು ಹೊಂದುವವನು ಪರಮಾತ್ಮನಲ್ಲವು
ಮುಕ್ತನಿಗೂ ಕೂಡ ಆ ನಾಮರೂಪಗಳನ್ನು ಉಂಟುಮಾಡುವ ಶಕ್ತಿಯಿಲ್ಲವು.
ಸೂ 1.3.43
ಮಲಗಿರುವಾಗಲೂ ಮತ್ತು ದೇಹಾವಸಾನಕಾಲದಲ್ಲೂ ಪರಮಾತ್ಮ ಜೀವಾತ್ಮರಿಗೆ ಭೇದವನ್ನೇ ಶ್ರುತಿಯು ಹೇಳಿರುವುದರಿಂದ
ಪ್ರಾಜ್ಞೇನಾತ್ಮನಾನ್ವಾರೂಢಃ ಉತ್ಸರ್ಜನ್ಯಾತಿ
ಬೃ ೬.೩.೩೫
ಸರ್ವಜ್ಞನಾದ ಪರಮಾತ್ಮನನ್ನೇ ಸಾರಥಿಯಾಗಿ ಹೊಂದಿ ಈ ಶಕಟರೂಪನಾದ ಜೀವನು ಸ್ಥೂಲ ಶರೀರವನ್ನು ಬಿಟ್ಟು ಉತ್ಕ್ರಾನ್ತಿ ದಶೆಯಲ್ಲಿ ಹೋಗುತ್ತಾನೆ
ಆದುದರಿಂದ ಪರಮಾತ್ಮನಿಗಿಂತ ಜೀವಾತ್ಮನು ಬೇರೆ ಎಂದು ಹೇಳಿರುವುದರಿಂದ ಆಕಾಶ ಶಬ್ದವಾಚ್ಯನು ಮುಕ್ತಾತ್ಮನಲ್ಲವು
ಸೂ 1.3.44
ಸರ್ವಸ್ಯಾಧಿಪತಿಃ
,
ಸರ್ವಸ್ಯವಶೀ
,
ಸರ್ವಸ್ಯೇಶಾನಃ
(ಬೃ 6.4.22) ಇತ್ಯಾದಿಗಳಲ್ಲಿ
ಪರಬ್ರಹ್ಮನೇ ಎಲ್ಲಕ್ಕೂ ಅಧಿಪತಿ
ಎಲ್ಲವನ್ನೂ ವಶದಲ್ಲಿಟ್ಟಿರುವವನು
ಎಲ್ಲಕ್ಕೂ ನಿಯಾಮಕನು
ಎಲ್ಲಾ ಭೂತಗಳಿಗೂ ಸ್ವಾಮಿಯು
ಪತಿ, ವಶೀ, ಈಶಾನಾ ಇತ್ಯಾದಿ ಶಬ್ದಗಳಿರುವುದರಿಂದ ಸುಷುಪ್ತಿ ಯಲ್ಲಿ ಜೀವನನ್ನು ಆಲಂಗಿಸುವವನೆಂದು ಹೇಳಲ್ಪಟ್ಟವನು ಮುಕ್ತಾತ್ಮನಿಗಿಂತ ಬೇರೆಯಾಗಿ ವಿಲಕ್ಷಣನೆಂಬುದು ಸ್ಥಾಪಿತವು
ತತ್ತ್ವಮಸಿ
ಎಂಬಲ್ಲಿ ಹೇಳಿದ ಐಕ್ಯವು, ಎಲ್ಲವೂ ಈ ಚೇತನನೂ ಆ ಕಾರಣದಿಂದ ಪರಬ್ರಹ್ಮನಿಗೆ ಶರೀರವಾಗಿ ಪರಬ್ರಹ್ಮನು ಆತ್ಮಾವಾಗಿರುವುದರಿಂದ
ಸರ್ವಂ ಖಲ್ವಿದಂ ಬ್ರಹ್ಮ
ಎಂದು ಹೇಳಲ್ಪಟ್ಟಿತು
ನೇಹನಾನಾಸ್ತಿಕಿಂಚನ ಏಕಮೇವಾದ್ವಿತೀಯಂ
ಎಂದು ಹೇಳಿ ಭೇದವನ್ನು ನಿಷೇಶಿಸಿರುವುದು ಕಾರ್ಯ-ಕಾರಣಗಳಿಗೆ ಅನನ್ಯತ್ವವನ್ನು ಹೇಳಿರುವುದರಿಂದ ಎಂದು ಗ್ರಹಿಸತಕ್ಕದ್ದು.