Please enable JavaScript.
Coggle requires JavaScript to display documents.
ಅಪಶೂದ್ರಾಧಿಕರಣಮ್ (ಸಿದ್ಧಾಂತ - ಶೂದ್ರರಿಗೆ ಉಪಾಸನದಲ್ಲಿ ಅಧಿಕಾರವಿಲ್ಲವು (ಶೋಚಯತಿ ಇತಿ…
ಅಪಶೂದ್ರಾಧಿಕರಣಮ್
ಸಿದ್ಧಾಂತ - ಶೂದ್ರರಿಗೆ ಉಪಾಸನದಲ್ಲಿ ಅಧಿಕಾರವಿಲ್ಲವು
ಉಪಾಸನವು ಮನೋವೃತ್ತಿ ರೂಪವಾದರೂ, ವೇದಾಧ್ಯಯನವು ಅವರಿಗೆ ಇಲ್ಲದುದರಿಂದ ಉಪಾಸನವು ಉಪಾಯವಾಗುವಂತಹ ಜ್ಞಾನ ಅವರಿಗಿಲ್ಲವಾದುದರಿಂದ ಸಾಮರ್ಥ್ಯವೂ ಇಲ್ಲವು
ನಿತ್ಯ ನೈಮಿತ್ತಿಕ ಕರ್ಮಗಳು ಔಪಾಸನಾದಿಗಳು ಮೊದಲಾದವುಗಳು ಅಂಗವಾಗಿ ತ್ರೈವರ್ಣಿಕರಿಗೆ ಮಾತ್ರವೇ ಅಧ್ಯಯನ ಅಧ್ಯಾಪನಾಧಿಕಾರಗಳು ಹೇಳಲ್ಪಟ್ಟಿರುವುದರಿಂದ ಉಪಾಸನಾಧಿಕಾರವು ಈ ಮೂರು ವರ್ಣದವರಿಗೆ ಮಾತ್ರವೇ
ಇತಿಹಾಸ ಪುರಾಣಾದಿಗಳ ಶ್ರವಣದಲ್ಲಿ ಮಾತ್ರವೇ ಅವರಿಗೆ ಅಧಿಕಾರವಿರುವುದು
ಅವರಿಗೆ ವಿಧಿಸಲ್ಪಟ್ಟ ಭಾಗವತ ಸಂಶ್ರಯಣ ಶರಣಾಗತಿಯ ಮೂಲಕವಾಗಿ ಅವರಿಗೆ ಸುಲಭೋಪಾಯವು ವಿಧಿಸಲ್ಪಟ್ಟಿರುವುದರಿಂದ
ಅದಕ್ಕೆ ಬೇಕಾದ ಪಾಪ ಪರಿಹಾರಕ್ಕಾಗಿ ಇತಿಹಾಸಾದಿ ಶ್ರವಣವು
ಇದುರಾದಿಗಳಿಗೆ ಪೂರ್ವಜನ್ಮ ಸಂಸ್ಕಾರ ಫಲವಾಗಿ ಬ್ರಹ್ಮಜ್ಞಾನವೇನೋ ಇತ್ತೆಂಬುದು ಮಹಾಭಾರತಾದಿಗಳಲ್ಲಿ ಒರಸಿದ್ಧವೇನೋ ಹೌದು
ಆದರೆ ಅವರುಗಳು ಉಪಾಸನ ಮಾಡಿದರೆಂಬ ಪ್ರಮಾಣವು ಭಾರತಾದಿಗಳಲ್ಲಿಲ್ಲವು
ಈ ಅರ್ಥವು ವಿದುರ ವಾಕ್ಯದಿಂದಲೇ ಸುವ್ಯಕ್ತವು -
ಧೃತರಾಷ್ಟ್ರನು ವಿದುರರನ್ನು ಕುರಿತು - "ಧರ್ಮೋಪದೇಶವನ್ನೆಲ್ಲಾ ಹೇಳಿದೆ, ಇನ್ನೂ ಮುಖ್ಯವಾದ ಉಪದೇಶವಿದ್ದರೆ ತಿಳಿಸು" ಎಂದು ಹೇಳಿದ್ದಕ್ಕೆ
ವಿದುರನು -"ನಾನು ಶೂದ್ರಜನ್ಮವನ್ನು ಎತ್ತಿರುತ್ತೇನಾದುದರಿಂದ ಮುಂದಕ್ಕೆ ಬ್ರಹ್ಮವಿದ್ಯೆಯನ್ನು ನನಗೆ ಹೇಳಲು ಜ್ಜಾನವಿದ್ದರೂ ಅಧಿಕಾರವಿಲ್ಲವು" ಎಂದು ಹೇಳಿರುತ್ತಾನೆ.
ಬ್ರಹ್ಮವಿದ್ಯೆ ಎಂದು ಉಚ್ಚರಿಸಲೂ ಕೂಡ ತನಗೆ ಯೋಗ್ಯತೆ ಇಲ್ಲವೆಂದು
ಅನ್ಯತ್
ಎಂಬ ಶಬ್ದವನ್ನು ಉಪಯೋಗಿಸಿರುವ ಶಾಸ್ತ್ರಜ್ಞರಾದ ವಿದುರರು ಶಾಸ್ತ್ರಾತಿಕ್ರಮಣವನ್ನು ಎಂದಿಗಾದರೂ ಮಾಡಿಯಾರೇ ?
ಸುಲಭಮಾರ್ಗವಿರುವಾಗ ಶಾಸ್ತ್ರ ವಿರುದ್ಧವಾದ ದುಷ್ಕರೋಪಾಯವು ಏತಕ್ಕೆ ?
ಬ್ರಹ್ಮಜ್ಞಾನವುಳ್ಳವರು ಎಂದರೆ ಪರಮಾತ್ಮನನ್ನು ಉಪಾಸಿಸಿದವರು ಎಂಬರ್ಥವಲ್ಲವು
ಶೋಚಯತಿ ಇತಿ ಶೂದ್ರಃ
ಎಂಬ ವ್ಯುತ್ಪತ್ತಿಯ ಮೂಲಕ ಬ್ರಹ್ಮವಿದ್ಯೆ ಇಲ್ಲವೇ ಎಂಬ ಶುಕ್, ಶೋಕವು ಜಾನಶ್ರುತಿಗೆ ಇದ್ದುದರಿಂದ ಶೂದ್ರ ಎಂಬ ಸಂಬೋಧನೆಯು
ಶೂದ್ರವರ್ಣನಾದುದರಿಂದಲ್ಲವು
ಸೂ 1.3.34
ಜಾನಶ್ರುತಿಯು ಕ್ಷತ್ರಿಯನು
ಆತನು ಕ್ಷತ್ರಿಯನು ಎಂದು ಹೇಳುವುದಕ್ಕೆ
ಬಹುದಾಯೀ
ಎಂದೂ,
ದಾನಪತಿ
ಎಂದು ,
ಬಹುಗ್ರಾಮಪ್ರಧಾನ
ದಿಂದಲೂ
ಜಾನಶ್ರುತಿಯು ಕ್ಷತ್ರಿಯನೆಂದು ತೋರಿಬರುತ್ತದೆ (ಛಾಂ. 4.1.1)
ಸೂ 1.3.35
ಮುಂದೆ ಇದೇ ಛಾಂದೋಗ್ಯದಲ್ಲಿ ಸಂಸರ್ಗ ವಿದ್ಯೆಯನ್ನು ಹೇಳಿರುವ ಪ್ರಕರಣದಲ್ಲಿ ಚೈತ್ರರಥನು ಕ್ಷತ್ರಿಯನೆಂದೂ ಆತನಿಗೆ ಬ್ರಾಹ್ಮಣರಾದಕಾಪೇಯರು ಯಜ್ಞ ಮಾಡಿಸಿದರು ಎಂಬ ಹೇತುವಿನಿಂದ, ಜಾನಶ್ರುತಿಯೂ ಕ್ಷತ್ರಿಯನೇ ವಿನಾ ಶೂದ್ರನಲ್ಲವು
ಸಾಧಾರಣವಾಗಿ ಬ್ರಹ್ಮವಿದ್ಯಾ ಉಪದೇಶಿಕಾಚಾರ್ಯನು ಬ್ರಾಹ್ಮಣನು
ಆತನಿಂದ ಬ್ರಾಹ್ಮಣ ಕ್ಷತ್ರಿಯಾದಿ ಮೂರು ವರ್ಣದವರಿಗೆ ಉಪದೇಶವೇ ವಿನಾ ಶೂದ್ರರಿಗೆ ಉಪದೇಶಿಸುವುದಿಲ್ಲವು.
ಸೂ 1.3.36
ಉಪನಯನ, ವೇದಾಧ್ಯಯನ ಮೊದಲಾದ ಸಂಸ್ಕಾರಗಳ ವಿಮರ್ಶೆ ಇಲ್ಲದುದರಿಂದಲೂ ಶೂದ್ರನಿಗೆ ಅಂತಹ ಸಂಸ್ಕಾರಗಳು ಕೂಡದೆಂದು ನಿಶೇಧಿಸಿರುವುದರಿಂದಲೂ ರೈಕ್ವರಿಂದ ಬ್ರಹ್ಮ ವಿದ್ಯೋಪದಿಷ್ಟನಾದ ಜಾನಶ್ರುತಿಯು ಶೂದ್ರನಲ್ಲವು
ನ ಶೂದ್ರೇ ಪಾತಕಂ ಕಿಂಚನ್ನಚ ಸಂಸ್ಕಾರಮರ್ಹತಿ
(ಮನು 10.126)
ಶೂದ್ರನಿಗೆ ಸಂಸ್ಕಾರದಲ್ಲಿ ಅರ್ಹತೆಯಿಲ್ಲವು, ಆದರಿಂದ ಆತನಿಗೇನೂ ಪಾಪವಿಲ್ಲವು
ಸೂ 1.3.37
ತದಭಾವ ನಿರ್ದಾರಣೇ ಚ ಪ್ರವೃತ್ತೇಃ
ಬಂದವನು ಶೂದ್ರನಲ್ಲವು ಎಂದು ನಿರ್ಧರಿಸಿಕೊಂಡೇ ಅನಂತರದಲ್ಲಿ ಬ್ರಹ್ಮವಿದ್ಯೆಯನ್ನು ಉಪದೇಶಿಸಿರುವುದರಿಂದ ಶೂದ್ರನಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವಿಲ್ಲವು
ನೈತದಬ್ರಾಹ್ಮಣೋ ವಕ್ತುಮರ್ಹತಿ ಸಮಿಧಂ ಸೋಮ್ಯಾಹರ
ಛಾಂ.4.4.5
ಎಂಬಲ್ಲಿ ಬ್ರಾಹ್ಮಣನಲ್ಲದವನು ಎಂದರೆ ಶೂದ್ರನು ಬ್ರಹ್ಮವಿದ್ಯೆಗೆ ಅನರ್ಹನಾದುದರಿಂದ, ಓ ಜಾಬಾಲಿಯೇ, ನೀನು ಅಂತವನಲ್ಲವಾದುದರಿಂದ ಸಮಿತ್ತನ್ನು ತೆಗೆದುಕೊಂಡು ಬಾ, ಬ್ರಹ್ಮವಿದ್ಯೆಯನ್ನು ಉಪದೇಶಿಸುವೆನು ಎಂಬ ಪ್ರಮಾಣವಿದೆ
ಸೂ 1.3.38
ವೇದವನ್ನು ಕೇಳುವುದು, ವೇದಾಧ್ಯಯನವನ್ನು ಮಾಡುವುದು, ಅದರ ಅರ್ಥಾನುಗುಣವಾಗಿ ಯಜ್ಞವನ್ನು ಅನುಷ್ಠಿಸುವುದು ಇವೆಲ್ಲಾ ಶೂದ್ರನಿಗೆ ನಿಷೇಧಿಸಿರುವುದರಿಂದ ಶೂದ್ರನಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವಿಲ್ಲವು
ಪ್ರಮಾಣ -
ತಸ್ಮಾತ್ ಶೂದ್ರ ಸಮೀಪೇನಾಧ್ಯೇತವ್ಯಂ
ಶೂದ್ರನ ಸಮೀಪದಲ್ಲಿ ಅಧ್ಯಯನ ಮಾಡಕೂಡದು
ಸೂ. 1.3.39
ಶ್ರವಣ, ಅಧ್ಯಯನಾದಿಗಳು ಶೂದ್ರನಿಗೆ ಕೂಡದೆಂದು ನಿಷೇಧಿಸಿರುವುದು ಸ್ಮೃತಿಯಲ್ಲೂ ಹೇಳಿರುವುದರಿಂದ ಶೂದ್ರನಿಗೆ ಅಧಿಕಾರವಿಲ್ಲವು.
ಹಾಗೆ ಕೇಳಿ ಅಧ್ಯಯನ ಮಾಡಿದರೆ ಗೌತಮ ಧರ್ಮಶಾಸ್ತ್ರದಲ್ಲಿ ಶಿಕ್ಷೆಯು ವಿಧಿಸಲ್ಪಟ್ಟಿರುತ್ತದೆ -
ಅಥಹಾಸ್ಯವೇದಮ್ ಉಪಶೃಷ್ಟವತು ತ್ರಪುಜತುಭ್ಯಾಂಶ್ರೋತ್ರ ಪೂರಣಂ, ಉದಾಹರಣೀ ಜಿಹ್ವಾಚ್ಛೇದೋ ಧಾರಣೀ ಶರೀರ ಭೇದಃ
ಸೂತ್ರಗಳು - 1.3.33 - 1.3.39
1.3.33 ಶುಗಸ್ಯ ತದನಾದರಣ-ಶ್ರವಣಾತ್ ತದಾದ್ರವಣಾತ್ ಸೂಚ್ಯತೇ ಹಿ
1.3.34 ಕ್ಷತ್ರಿಯತ್ವಗತೆಶ್ಚ
1.3.35 ಉತ್ತರತ್ರ ಚೈತ್ರರಥೇನ ಲಿಙ್ಗಾತ್
1.3.36 ಸಂಸ್ಕಾರಪರಾಮರ್ಶಾತ್ ತದಭಾವಾಭಿಲಾಷಾಚ್ಚ
1.3.37 ತದಭಾವನಿರ್ಧಾರಣೆ ಚ ಪ್ರವೃತ್ತೇಃ
1.3.38 ಶ್ರವಣಾಧ್ಯಯನಾರ್ಥಪ್ರತಿಷೆಧಾತ್
1.3.39 ಸ್ಮೃತೆಶ್ಚ
ಪೂರ್ವಪಕ್ಷ - ಶೂದ್ರನಿಗೆ ಉಪಾಸನದಲ್ಲಿ ಅಧಿಕಾರ ಉಂಟು
ಶೂದ್ರನಿಗೂ ಕೂಡ ದೇಹೇಂದ್ರಿಯಗಳ ಶಕ್ತಿಯು ಪಟುತರವಾಗಿರುವುದರಿಂದ ಸಾಮರ್ಥ್ಯವೂ, ಮೋಕ್ಶ ಬೇಕೆಂಬ ಅರ್ಥಿತ್ವವೂ ಇರುವುದರಿಂದ ಬ್ರಹ್ಮವಿದ್ಯೆಯಲ್ಲಿ ಅವರಿಗೂ ಅಧಿಕಾರ ಉಂಟು
ಅನಗ್ನಿಮತ್ವವಿದ್ದರೂ ಮನಸ್ಸಿನಿಂದ ಬ್ರಹ್ಮೋಪಾಸನೆಯನ್ನು ಮಾಡಲು ಅವರೂ ಸಮರ್ಥರೇ
ಶ್ರಾವಯೋಚ್ಚತುರೋವಣಾನ್ ಕೃತ್ವಾ ಬ್ರ್ರಾಹ್ಮಣಮಗ್ರತಃ
-
ಬ್ರಾಹ್ಮಣನನ್ನು ಮುಂದು ಮಾಡಿಕೊಂಡು ನಾಲ್ಕು ವರ್ಣದವರಿಗೂ ಇತಿಹಾಸ ಪುರಾಣಗಳನ್ನು ಕೇಳಲು ಅವರಿಗೆ ಅನುಮತಿ ಕೊಟ್ಟಿರುವುದರಿಂದಲೂ ಪರಬ್ರಹ್ಮ ಜ್ಞಾನ ಸ್ವಲ್ಪ ಮಟ್ಟಿಗೆ ಇದ್ದು ಬ್ರಹ್ಮವಿದ್ಯೆಯ ಮಹಾತ್ಮ್ಯೆಯನ್ನು ತಿಳಿಯಲು ಅವರಿಗೆ ಯೋಗ್ಯತೆಯುಂಟು
ವಿದುರಾದಿಗಳಿಗೆ ಅಂತಹ ಬ್ರಹ್ಮಜ್ಞಾನವಿತ್ತೆಂಬುದು ಭಾರತಗಳಲ್ಲಿ ಪ್ರಸಿದ್ಧವು
ಸಂಸರ್ಗವಿದ್ಯೆಯಲ್ಲಿ
ಆಜಹಾರೇ ಮಾಶ್ಶೂದ್ರ
ಎಂದು ಜಾನಶ್ರುತಿ ಎಂಬ ರಾಜನನ್ನು ಶೂದ್ರ ಎಂದು ಸಂಬೋಧಿಸಿ ಬ್ರಹ್ಮವಿದ್ಯೆಯನ್ನು ರೈಕ್ವರು ಉಪದೇಶಿಸಿರುವುದು ಉಪನಿಷತ್ತಿನಲ್ಲೇ ಇರುವುದರಿಂದಲೂ
ಸಂಶಯ
ಈ ಅಧಿಕರಣದಲ್ಲಿ ಶೂದ್ರನಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರ ಉಂಟೇ ಇಲ್ಲವೇ ಅಂಬುದು ಚರ್ಚಿಸಲ್ಪಡುತ್ತದೆ
ಸೂ 1.3.33