Please enable JavaScript.
Coggle requires JavaScript to display documents.
ಮಧ್ವಧಿಕರಣಮ್ (ಸೂತ್ರಗಳು - 1.3.30 - 1.3.32 - ಇಲ್ಲಿ ಮೊದಲೆರಡು ಸೂತ್ರಗಳು…
ಮಧ್ವಧಿಕರಣಮ್
ಸೂತ್ರಗಳು - 1.3.30 - 1.3.32 - ಇಲ್ಲಿ ಮೊದಲೆರಡು ಸೂತ್ರಗಳು ಪೂರ್ವಪಕ್ಷ ಸೂತ್ರಗಳು
1.3.30 ಮಧ್ವಾದಿಶ್ಟ ಸಂಭವಾದನಧಿಕಾರಂ ಜೈಮಿನಿಃ
1.3.31 ಜ್ಯೋತಿಷಿ ಭಾವಾಚ್ಚ
1.3.32 ಭಾವಂತು ಬಾದರಾಯಣೋಸ್ತಿಹಿ
ಸಂಗತಿ -
ಹಿಂದೆ ದೇವತೆಗಳಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರ ಉಂಟೆಂದು ಸ್ಥಾಪಿತವು.
ಈ ಅಧಿಕರಣದಲ್ಲಿ ವಸ್ವಾದಿಗಳಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವುಂಟೆಂದು ಸ್ಥಾಪಿಸುತ್ತಾರ್
ಪೂರ್ವಪಕ್ಷ - ವಸ್ವಾದಿಗಳಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವಿಲ್ಲ
ಮಧುವಿದ್ಯೆಯೂ ಬ್ರಹ್ಮವಿದ್ಯೆಯು. ಆ ವಿದ್ಯೆಯಲ್ಲಿ ವಸುಲೋಕ ಪ್ರಾಪ್ತಿಯುಂಟಾಗಿ ಅನಂತರ ಮೋಕ್ಶವು ಎಂದು ಹೇಳಲ್ಪಟ್ಟಿರುತ್ತದೆ.
ಆದುದರಿಂದ ವಸ್ವಾದಿಗಳಾದ ದೇವತೆಗಳಿಗೆ ಮಧುವಿದ್ಯೆಯಲ್ಲಿ ವಸ್ವಾದಿಲೋಕವೇ ಪ್ರಾಪ್ಯವೆಂದರೆ ಸರಿಹೋಗುವುದಿಲ್ಲವಾದುದರಿಂದ ವಸ್ವಾದಿಗಳಿಗೆ (ಈಗಲೇ ಅಂತಹ ವಸುಲೋಕ ಪ್ರಾಪ್ತಿ ಇರುವುದರಿಂದ) ಮಧುವಿದ್ಯೆಯಲ್ಲಿ ಅಧಿಕಾರವಿಲ್ಲ
ಎಂದು ಜೈಮಿನಿ ಆಚಾರ್ಯರು ಅಭಿಪ್ರಾಯ ಪಟ್ಟರು
ಹಾಗೆಯೇ ಇಂದ್ರ ಲೋಕ ಪ್ರಾಪ್ತಿ ಹೇಳುವ ಪ್ರತರ್ದನ ವಿದ್ಯೆಯಲ್ಲಿ ಇಂದ್ರಲೋಕದಲ್ಲಿರುವ ದೇವತೆಗಳಿಗೆ ಹೇಳುವುದು ಅಸಂಗತವೆಂಬ ಭಾವವು
ಕರ್ತೃ ಕರ್ಮ ಭಾವವೆರಡೂ ಒಂದೇ ಆಗಲು ಸಾಧ್ಯವಿಲ್ಲವು
ಸೂ 1.3.31
ಆ ವಸು ರುದ್ರ ಆದಿತ್ಯಾದಿಗಳಿಗೆ ಉಪಾಸನೆಯು ಸರ್ವಪ್ರಕಾಶಕನಾಗಿ ಪ್ರಕಾಶಮಾನನಾಗಿರುವ ಪರಬ್ರಹ್ಮನಲ್ಲೇ ಶ್ರುತಿಯ ಭಾವವಾದುದರಿಂದಲೂ ಕೂಡ ವಸ್ವಾದಿಗಳಿಗೆ ಮಧುವಿದ್ಯೆಯಲ್ಲಿ ಅಧಿಕಾರವಿಲ್ಲವು
ತಂ ದೇವಾ ಜ್ಯೋತಿಷಾಂ ಜ್ಯೋತಿಃ ಆಯುರ್ಹೋಪಾಸತೇ ಅಮೃತಮ್
(ಬೃ 6.4.16)
ಅರ್ಥ - ಪರಬ್ರಹ್ಮನನ್ನು ದೇವತೆಗಳು ಉಪಾಸಿಸುತ್ತಾರೆಂದು ಹೇಳಿರುವುದನ್ನು ನೋಡಿದರೆ ದೇವತೆಗಳಿಗೆ ಮುಖ್ಯವಾಗಿ ಪರಬ್ರಹ್ಮೋಪಾಸನವಲ್ಲದೆ ಇತರ ಉಪಾಸನವು ಸರಿಯಲ್ಲವೆಂಬುದು ತೋರಿಬರುತ್ತದೆ.
ಪರಬ್ರಹ್ಮನ ಪ್ರಾಪ್ಯವೇ ವಿನಾ, ತಾವೇ ತಮಗೆ ಪ್ರಾಪ್ಯವಲ್ಲವು
ವಿಷಯ
ಅಸೌ ವಾ ಆದಿತ್ಯೋ ದೇವ ಮಧು
(ಛಾಂ.3.1.1) ಎಂದು ಪ್ರಾರಂಭಿಸಿ
ಸ ಏತದೇವಮಮೃತಂ ವೇದ, ವಸೂನಾಮ್ ಏಕೈಕೋ ಭೂತ್ವಾಗ್ನಿನೈವ ಮುಖೇನೃತದೇವಾಮೃತಂ ದೃಷ್ಟ್ವಾ ತೃಪ್ಯತಿ
ಸಿದ್ಧಾಂತ - ವಸ್ವಾದಿಗಳಿಗೆ ಅಧಿಕಾರವುಂಟು
ಸೂ 1.3.30
ಈಗ ಅವರು ಇರುವ ವಸುಲೋಕಪ್ರಾಪ್ತಿಯನ್ನು ಫಲವಾಗಿ ಇಲ್ಲಿ ಹೇಳಲಿಲ್ಲವು
ಮುಂದೆ ಕಲ್ಪಾಂತರದಲ್ಲಿ ಉಂಟಾಗುವ ವಸುಲೋಕ ಪ್ರಾಪ್ತಿಯುಂಟಾಗಿ ಅಲ್ಲಿಂದ ಮೋಕ್ಷವು ಹೇಳಲ್ಪಟ್ಟಿತು
ಆದುದರಿಂದ ಅವರುಗಳು ವಸ್ವಾದಿಲೋಕ ಪ್ರಾಪ್ತಿಗಾಗಿ ಪರಬ್ರಹ್ಮನನ್ನು ಉಪಾಸಿಸುವುದರಲ್ಲಿ ಏನೊಂದೂ ವಿರೋಧವಿಲ್ಲವು
ಸೂ 1.3.32
ಸೂತ್ರಕಾರರಾದ ವ್ಯಾಸಮಹರ್ಷಿಯು ವಸ್ವಾದಿಗಳಿಗೂ ಕೂಡ ಮಧುಬ್ರಹ್ಮವಿದ್ಯೆಯಲ್ಲಿ ಅಧಿಕಾರವಿರುವುದನ್ನು ತಿಳಿದಿರುತ್ತಾರೆ.
ಏಕೆಂದರೆ ಎಲ್ಲಾ ಬ್ರಹ್ಮವಿದ್ಯೆಯಲ್ಲೂ ನಮ್ಮ ಹಾಗೆಯೇ ಅವರಿಗೂ ಪರಬ್ರಹ್ಮಪ್ರಾಪ್ತಿ ವಿಷಯದಲ್ಲಿ ಅರ್ಥಿತ್ವ ಸಾಮರ್ಥ್ಯ ವೆರಡೂ ಇರುತ್ತದೆಯಷ್ಟೇ.
ಈಗ ವಸ್ವಾದಿಗಳಾಗಿದ್ದರೂ ತಮಗೆ ಆತ್ಮಾವಾಗಿರುವ ಪರಬ್ರಹ್ಮನನ್ನು ಉಪಾಸನ ಮಾಡಿದರೆ, ಕಲ್ಪಾಂತ ಪುನಃ ಸೃಷ್ಟಿಯಲ್ಲಿ ವಸ್ವಾದಿ ಲೋಕಪ್ರಾಪ್ತಿಯುಂಟಾಗಿ ಮುಂದೆ ಆ ಕಲ್ಪಾಂತದಲ್ಲಿ ಮೋಕ್ಷವನ್ನು ಹೊಂದುವರು.
ಆದುದರಿಂದ ಏನೊಂದೂ ಅಸಾಮಂಜಸ್ಯವಾಗಲಿ ವಿರೋಧವಾಗಲಿ ಇಲ್ಲವು
ಈ ವಸ್ವಾದಿ ಲೋಕ ಪ್ರಾಪ್ತಿಯನ್ನೇ ಶಾಸ್ತ್ರಗಳಲ್ಲಿ ಕೈವಲ್ಯವೆಂದು ಹೇಳುವರು.
ಇಲ್ಲಿಂದ ಪುನರ್ಜನ್ಮವಿಲ್ಲದೆ ಮೋಕ್ಷವನ್ನು ಹೊಂದುವರು
ಇಂತಹ ಉಪಾಸಕನನ್ನೇ ಗೀತೆಯಲ್ಲಿ ಜಿಜ್ಞಾಸುವೆಂದು ಹೇಳಲ್ಪಟ್ಟಿರುವರು
ಆದರೆ ಅಲ್ಲಿ ಉಪಪಾದಿಸಿರುವುದು ಪಂಚಾಗ್ನಿವಿದ್ಯೆಯನ್ನು ಕುರಿತು
ಇದು ಮಧುವಿದ್ಯೆ , ಪ್ರತರ್ದನವಿದ್ಯೆಗಳಿಗೂ ಉಪಲಕ್ಷಣವು
ಸಂಶಯ
ಮಧುವಿದ್ಯೆಯಲ್ಲಿ ವಸ್ವಾದಿಗಳಿಗೆ ಅಧಿಕಾರ ಉಂಟೋ ಇಲ್ಲವೋ ?