Please enable JavaScript.
Coggle requires JavaScript to display documents.
ವೈಶ್ವಾನರಾಧಿಕರಣಮ್ (ಸೂತ್ರಗಳು - 1.2.25 - 1.2.33 (1.2.25 ವೈಶ್ವಾನರಸ್ಸಾಧಾರಣ…
ವೈಶ್ವಾನರಾಧಿಕರಣಮ್
-
ಸಿದ್ಧಾಂತ
- ಸೂ1.2.25 ಸಾಧಾರಣವಾಗಿ ಇತರ ಅರ್ಥಗಳಿದ್ದರೂ ಈ ಪ್ರಕರಣದಲ್ಲಿ ಆ ವೈಶ್ವಾನರನು ಎಲ್ಲರಿಗೂ ಆತ್ಮಾ ಎಂದು ಆತನೇ ಪರಬ್ರಹ್ಮವೆಂದೂ ವಿಶೇಷಿಸಿ ಹೇಳಿರುವುದರಿಂದ
-
- ಸೂ 1.2.27 ಜಾಠರಾಗ್ನಿ ಶರೀರಕನಾದ ಪರಮಾತ್ಮನೇ ಇಲ್ಲಿ ಉಪಾಸ್ಯನು
ಕೇವಲ ಜಾಠರಾಗ್ನಿಗೆ ತ್ರೈಲೋಕ್ಯ ಶರೀರತ್ವ ಮೊದಲಾದವನ್ನು ಹೇಳಿರುವುದು ಅಸಂಭವವಾದುದರಿಂದಲೂ ಪರಮಾತ್ಮನೇ ಇಲ್ಲಿ ಹೇಳಲ್ಪಟ್ಟವನು
- ಈ ವೈಶ್ವಾನರನನ್ನು ಪ್ರಸಿದ್ಧನಾದ ಮಹಾಪುರುಷನಾದ ಪರಮಾತ್ಮನೆಂದು ಹೇಳುತ್ತದೆ.
-
ಸೂ. 1.2.28 ಇದೇ ಕಾರಣಗಳಿಂದಲೇ ವೈಶ್ವಾನರ ಶಬ್ದಕ್ಕೆ ಇನ್ನು ಎರಡು ಅರ್ಥಗಳಾದ ದೇವತೆ ಮತ್ತು ತೇಜಸ್ಸು ಇವುಗಳು ಆಗುವುದಿಲ್ಲ
ಸೂ1.2.29 ವೈಶ್ವಾನರ ಶಬ್ದಕ್ಕೆ ಮುಖ್ಯವಾದ ಅಗ್ನಿ ಎಂಬರ್ಥವನ್ನು ಬಿಟ್ಟು ವ್ಯುತ್ಪತ್ತಿ ಮೂಲಕವಾಗಿ ಪರಮಾತ್ಮನಿಗೆ ಅನ್ವಯಿಸಿ ಹೇಳಿದರೂ ಕೂಡ ಏನೊಂದೂ ವಿರೋಧವಿಲ್ಲವು
-
-
-
- ಸೂ 1.2.30 ಅಪರಿಚ್ಛಿನ್ನನಾದ ಪರಮಾತ್ಮನಿಗೆ ಈ ಬ್ರಹ್ಮವಿದ್ಯೆಯ ಉಪಾಸನಾ ಬುದ್ಧಿ ಸೌಕರ್ಯಕ್ಕಾಗಿ ದ್ಯು ಮೊದಲು ಪೃಥಿವೀವರೆಗೂ ಅವಯವಗಳನ್ನು ಕಲ್ಪಿಸಿ ಅಂತಹ ಪರಿಚ್ಛಿನ್ನ ರೂಪವನ್ನು ಹೇಳಿದುದು ಎಂದು ಆಶ್ಮರಥ್ಯರಾದ ಆಚಾರ್ಯರ ಅಭಿಪ್ರಾಯವು
ಸೂ. 1.2.31 ದ್ಯು ಮೊದಲುಗೊಂಡು ಪೃಥಿವೀ ವರೆಗೂ ಇರುವನೆಂದು ಪರಿಚ್ಛಿನ್ನವಾದ ಪ್ರದೇಶದ ಹೇಳಿಕೆಯು ಇಂತಹ ದಿವ್ಯಮಂಗಳ ವಿಗ್ರಹವು ಪುನಃ ಪುನಃ ಸ್ಮರಿಸಿ ಉಪಾಸಿಸಿ ಅದರಿಂದ ಮೋಕ್ಷಫಲವನ್ನು ಅನುಭವಿಸುವುದಕ್ಕಾಗಿ ಎಂದು ಬಾದರಿ ಆಚಾರ್ಯರು ಹೇಳುವರು.
- ವೈಶ್ವಾನರ ಬ್ರಹ್ಮವಿದ್ಯೀ ಅಂಗಭೂತವಾಗಿ ಪ್ರತಿದಿನವೂ ಅಗ್ನಿಹೋತ್ರವನ್ನು ಅನುಷ್ಠಿಸಿ ಪ್ರಾಣಾಹುತಿಯನ್ನು ಅನುಶ್ಠಿಸತಕ್ಕದ್ದಾಗಿರುತ್ತದೆ.
ಈ ಉಪಾಸಕನ ಉಪಾಸನೆಯೂ ಕೂಡ ಒಂದು ವಿಧವಾದ ಅಗ್ನಿ ಹೋತ್ರ ಪ್ರಾಣಾಹುತಿಯೇ ಎಂದು ಪರಿಕಲ್ಪಿಸಿ , "ಉರಏವವೇದಿ" ಎಂದುಹೇಳಿ, ಅಗ್ನಿಹೋತ್ರವನ್ನು ಉಂಟುಮಾಡುವುದಕ್ಕಾಗಿ ಎಂದು ಜೈಮಿನಿ ಆಚಾರ್ಯರು ಅಭಿಪ್ರಾಯಪಡುವರು.
-
- ಸೂ.1.2.33 ಉಪಾಸಕನು ತನ್ನ ಶರೀರದಲ್ಲಿ ಪರಮಾತ್ಮಾವಿನ ಶರೀರಾನುಸಂಧಾನವನ್ನು ಮಾಡಿ, ವೈಶ್ವಾನರನನ್ನು ಆರಾಧಿಸಿ ಉಪಾಸನೆಯನ್ನು ಮಾಡಿದರೆ ಹತ್ತಿಯು ಬೆಂದುಹೋಗುವ ಹಾಗೆ ಪಾಪಗಳೆಲ್ಲಾ ಪರಿಹಾರವಾಗಿ ಮೋಕ್ಷ ಪ್ರಾಪ್ತಿ ಎಂದು ಫಲವು ಹೇಳಿರುತ್ತದೆ.
-
ಪೂರ್ವಪಕ್ಷ
- ವೈಶ್ವಾನರನ ಸಾಧಾರಣ ಅರ್ಥಗಳನ್ನು ಬಿಟ್ಟು ವಿಶೇಷಾರ್ಥದಿಂದ ನಾಲ್ಕನೆಯ ಅರ್ಥ ಹೇಗೆ ?
- ಈ ವೈಶ್ವಾನರನು ಪ್ರಸಿದ್ಧವಾದ ಅಗ್ನಿ ಎಂದು ಹೇಳಿರುವುದರಿಂದ ಮತ್ತು
ಆದಿ ಶಬ್ದದಿಂದ ಇದೇ ಪ್ರಕರಣದಲ್ಲಿ "ಹೃದಯ ಗಾರ್ಹಪತ್ಯೋ, ಮನೋಽನ್ವಾಹಾರ್ಯ ಪಚನ ಆಸ್ಯ ಮಾಹವನೀಯ" (ಛಾಂ.5.18.2) ಹೀಗೆ ತ್ರೇತಾಗ್ನಿಯನ್ನು ರೂಪಕ ಮಾಡಿ ಹೇಳಿರುವುದರಿಂದ
- ಮುಂದೆ 5.16.1 ರಲ್ಲಿ "ಪ್ರಾಣಾಯಸ್ವಾಹ" ಎಂದಿರುವುದರಿಂದಲೂ , "ಸ ಯೋ ಹೃತಮೇವಮಗ್ನಿಂ ವೈಶ್ವಾನರಂ ಪುರುಷ ವಿಧಂ ಪುರುಷೇಽನ್ತಃ ಪ್ರತಿಷ್ಠಿತಂ ವೇದ" ಎಂದು
-
- ಯಸ್ತ್ವೇತಮೇವಂ ಪ್ರಾದೇಶಮಾತ್ರಂ ಅಭಿಮಾನಮಾತ್ಮಾನಂ ವೈಶ್ವಾನರಮ್ *ಛಾಂ.5.18.1) ಎಂದು ಅಪರಿಚ್ಛಿನ್ನನಾದ ಪರಮಾತ್ಮನಿಗೆ ದ್ಯು ಎಂಬಲ್ಲಿ ಪೃಥಿವೀವರೆಗೂ ಪ್ರದೇಶ ಮಾತ್ರದಲ್ಲಿ ಪರಿಚ್ಛಿನ್ನತೆಯನ್ನು ವಿಶ್ವರೂಪಿ ಎಂದು ಬೋಧಿಸುವುದು ಸರಿಯೇ ?
- ಈ ವೈಶ್ವಾನರನು ಪರಮಾತ್ಮನೇ; ಆದರೆ ತ್ರೈಲೋಕ್ಯ ಶರೀರನೆಂದು, ಆತನೇ ಉಪಾಸ್ಯನೆಂದು
ಹ್ರೆೇಳಿದರೆ,
-
-
- ದ್ಯುವೇ ಮೊದಲಾದ ದೇಹವುಳ್ಳ ಈ ವೈಶ್ವಾನರ ಪರಮ ಪುರುಷನನ್ನು ಈ ಉಪಾಸಕನ ಶರೀರದಲ್ಲಿ ಪ್ರಾಣಾಗ್ನಿಹೋತ್ರ ಆರಾಧನೆಗಾಗಿ ಶ್ರುತಿಯಲ್ಲಿ ಹೇಳಲ್ಪಟ್ಟಿರುತ್ತದೆ ಅಷ್ಟೇ.
-
-
ಸಂಗತಿ -
ಹಿಂದೆ ಅಕ್ಷರ ಶಬ್ದವಾಚ್ಯನಿಗೆ ರೂಪೋಪನ್ಯಾಸವೆಂದರೆ ವಿಶ್ವರೂಪವನ್ನು ವಿಶೇಷಿಸಿ ಹೇಳಿದುದರಿಂದ ಪರಮಾತ್ಮನೆಂದು ಸಾಧಿಸಿದರು.
-
-