Please enable JavaScript.
Coggle requires JavaScript to display documents.
ಅತ್ತ್ರಧಿಕರಣಮ್ (ಸೂತ್ರಗಳು - 1.2.9 -1.2.12 (1.2.9 ಅತ್ತಾ ಚರಾಚರಗ್ರಹಣಾತ್, 1.2.10…
ಅತ್ತ್ರಧಿಕರಣಮ್
ಸೂತ್ರಗಳು - 1.2.9 -1.2.12
1.2.9 ಅತ್ತಾ ಚರಾಚರಗ್ರಹಣಾತ್
1.2.10 ಪ್ರಕರಣಾಚ್ಚ
1.2.11 ಗುಹಾಂ ಪ್ರವಿಷ್ಟಾವಾತ್ಮಾನೌಹಿ ತದ್ದರ್ಶನಾತ್
1.2.12 ವಿಶೇಷಣಾಚ್ಚ
ಸಿದ್ಧಾಂತ - ಪರಮಾತ್ಮನನ್ನೇ ಹೇಳಿರುವುದು; ಏಕೆಂದರೆ -
ಸೂ.1.2.9
-
ಅತ್ತಾ
ಎಂಬುವನು ಎಲ್ಲವನ್ನೂ ಪ್ರಳಯದಲ್ಲಿ ನುಂಗಿಬಿಡುವುದರಿಂದ, ಸೃಷ್ಟಿ, ಸ್ಥಿತಿ, ಲಯಾದಿಗಳಿಗೆ ಕಾರಣನಾದ ಪರಮಾತ್ಮನು, ಜೀವನಲ್ಲವು.
ಪ್ರಳದಲ್ಲಿ ಸಮಸ್ತ ಚರಾಚರಗಳನ್ನು ತನ್ನಲ್ಲಿ ಲಯವಾಗುವ ಹಾಗೆ ನುಂಗಿಬಿಡುವ ಸಾಮರ್ಥ್ಯವು ಜೀವನಿಗಲ್ಲವು, ಪರಮಪುರುಷನಿಗೆ ಮಾತ್ರವೇ.
ಇಲ್ಲಿ ಭೋಕ್ತೃತ್ವವು ಜೀವನಿಗೆ ಇರುವ ಹಾಗೆ ಪರಮಾತ್ಮನಿಗೆ ಕರ್ಮವಶ್ಯತೆಯಿಂದಲ್ಲವು.
ಜಗತ್ತಿನ ಸೃಷ್ಟಿ ಸ್ಥಿತಿ ಲಯ ರೂಪ ಲೀಲೆಯುಳ್ಳ ಪರಮ ಪುರುಷನೇ ಅಕರ್ಮವಶ್ಯನಾಗಿಯೇ ಭೋಕ್ತಾ.
ಮುಂದೆ ’
ಸೋಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್"
ಎಂದು ಉಪಾಯಾನುಷ್ಠಾನ ಮಾಡಿದವನಿಗೆ ಈ ವಿಷ್ಣುವಿನ ಪರಮಪದವನ್ನು ಹೊಂದುವನೆಂದು ಹೇಳಿರುವುದರಿಂದ ಇಲ್ಲಿಯೂ ಪರಮಪುರುಷನಾದ ವಿಷ್ಣುವೇ ಹೇಳಿರಬೇಕು.
ಸೂ.1.2.10
ಇಲ್ಲಿ ಹೇಳಿರುವ ಪ್ರಕರಣವೆಲ್ಲಾ ಪರಮಾತ್ಮ ವಿಷಯವು.
’ಮಹಾನ್ತಂ ವಿಭುಮಾತ್ಮಾನಂ ಮತ್ವಾಧೀರೋ ನಶೋಚತಿ’
-
ಸ್ವರೂಪ ಗುಣ ವಿಭವೈಶ್ವರ್ಯಾದಿಗಳಲ್ಲಿ ಮಹತ್ತಾದವನಾಗಿ
ಸ್ವರೂಪವನ್ನು ವ್ಯಾಪಿಸುವನಾಗಿ
ಎಲ್ಲಕ್ಕೂ ಆತ್ಮಾವಾಗಿರುವನನ್ನು
ಉಪಾಸಿಸಿ
ಬುದ್ಧಿಯಿಂದ ರಮಿಸುವ ಧೀರರು
ಆತನನ್ನು ಪ್ರತ್ಯಕ್ಷೀಕರಿಸಿ
ಪರಜ್ಞಾನರೂಪ ಭಕ್ತಿಯಿಂದ ಆನಂದಿಸುವರು
ದುಃಖಕ್ಕೆ ವಶವಾಗುವದಿಲ್ಲವು.
ವೇದಗಳನ್ನು -
ತಾನೇ ಗ್ರಹಿಸಿ ;
ಇತರರಿಗೆ ಪ್ರವಚನ ಮಾಡಿಸುವುದರಿಂದಾಗಲಿ;
ಅದನ್ನು ಮನಸ್ಸಿನಲ್ಲಿ ಧಾರಣಮಾಡುವುದರಿಂದಾಗಲಿ,
ಈ ಪರಮಾತ್ಮನು ಲಭ್ಯನಲ್ಲವು.
ಇವುಗಳಿಂದ ಅನುಗೃಹೀತವಾದ ಪ್ರಪನ್ನನು ಮಾಡುವ ಸಾಧನದಿಂದ ಪ್ರೀತನಾದರೇನೆ ಆತನು ತನ್ನ ಸಾಯುಜ್ಯವನ್ನು ಕೊಡುವನು.
ಸೂ.1.2.11
ಋತಂ ಪಿಬಂತೌ ಎಂದು ಹೇಳಿರುವವರು
ಗುಹಾಯಾಂ ಪ್ರವಿಷ್ಟೌ
ಎಂದು ಮುಣ್ದೆ ಹೇಳಿರುವುದರಿಂದ ಇವರುಗಳು ಜೀವಾತ್ಮ ಪರಮಾತ್ಮರುಗಳೇ.
ಈ ಉಪನಿಷತ್ವಾಕ್ಯದ ಸರಿಯಾದ ಅರ್ಥ -
ಕರ್ಮ ಫಲಾನುಭವ ಮಾಡುವ,
ಸುಕೃತ ಸಾಧ್ಯವಾದ ಈ ಲೋಕದಲ್ಲೇ ಇರುವ ಜೀವನ ಹೃದಯ ಗುಹೆಯನ್ನು ಪ್ರವೇಶಿಸಿರುವ
ಆ ಪರಮಾಕಾಶದಲ್ಲಿ ತುಂಬಾ ಉತ್ಕೃಷ್ಟವಾದ ಹಾರ್ದಾಕಾಶದಲ್ಲಿರುವ
ಪ್ರಕೃತಿ ಸಂಬಂಧದಿಂದ ಜ್ಜಾನತಿರೋಹಿತತ್ವವನ್ನು ಹೋದಿರುವ
ಜೀವಾತ್ಮನೂ ಮತ್ತು ಛಾಯಾ ಶಬ್ದವಾಚ್ಯನಾದ ಪರಮಾತ್ಮನೂ
ಉಪಾಸಕ-ಉಪಾಸ್ಯನೂ
ಪ್ರಾಪ್ತಾ - ಪ್ರಾಪ್ಯರೂ ಎಂದು
ಪಂಚಾಗ್ನಿ ಶುಶ್ರೂಷಾ ಪರರಾದ ಪ್ರಾಜ್ಞರು ಹೇಳುವರು.
ಈ ಜೀವನು ಇರುವ ಹೃದಯ ಗುಹೆಯಲ್ಲಿಯೇ ಪರಮಾತ್ಮನೂ ಇರುವನು
ಸೂ 1.2.12
ಜೀವ ಪರಮಾತ್ಮರುಗಳೇ ಇಲ್ಲಿ ವಿಶೇಷಿಸಿ ಹೇಳಿರುವುದರಿಂದ
ಅತ್ತಾ
ಎಂದು ಹೇಳಿರುವವನು ಪರಮಾತ್ಮನೇ ಸರಿ.
ಪರಮಾತ್ಮನು ಉಪಾಸ್ಯನು ಪ್ರಾಪ್ಯನು ಇತ್ಯಾದಿ ವಿಶೇಷಿಸಿರುವುದು.
ಜೀವಾತ್ಮನು ಉಪಾಸಕನು ಪ್ರಾಪ್ತಾ ಎಂಬುದಾಗಿ ವಿಶೇಷಿಸಿರುವದು
ಪ್ರಮಾಣಗಳು -
ನಜಾಯತೇ ಮ್ರಿಯತೇವ ವಿಪಶ್ಚಿತ್
ಎಂಬಲ್ಲಿ ಜೀವನು ಹೇಳಲ್ಪಟ್ಟನು
ಅಣೋರಣೀಯಾನ್ ಮಹತೋ ಮಹೀಯಾನ್
ಇಲ್ಲಿ ಪರಮಾತ್ಮನು ಹೇಳಲ್ಪಟ್ಟನು.
ನಾಯಮಾತ್ಮಾ ಪ್ರವಚನೇನ ಲಭ್ಯಃ
- ಪರಮಾತ್ಮನು ಪ್ರಾಪ್ಯನಾಗಿಯೂ, ಜೀವಾತ್ಮನು ಪ್ರಾಪ್ತಾವಾಗಿಯೂ ಹೇಳಲ್ಪಟ್ಟನು
ಯಸ್ಸೇತುರೀಜಾನಾನಾಮಕ್ಷರಂ ಬ್ರಹ್ಮಯತ್ಪರಮಂ (ಕಠ 1.3.2)
- ಪ್ರಾಪ್ಯ ಪ್ರಾಪ್ತಾ ಇಬ್ಬರೂ ಹೇಳಲ್ಪಟ್ಟಿರುತ್ತಾರೆ.
ಪೂರ್ವಪಕ್ಷ - ಜೀವಾತ್ಮಾ ಏಕೆಂದರೆ -
ಪರಮಾತ್ಮಾ ಅನಶ್ನನಾಗಿ ಸುಮ್ಮನೆ ಪ್ರಕಾಶಿಸಿಕೊಂಡಿರುವುದರಿಂದ, ಪರಮ ಪುರುಷನು ಭೋಕ್ತಾ ವಲ್ಲ, ಜೀವಾತ್ಮನೇ ಭೋಕ್ತಾ
ಮುಂದೆ ಕಠ (3.1.1) ರಲ್ಲಿ - 'ಋತಂ ಪಿಬನ್ತೌ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೌ ಪರಮೇ ಪರಾರ್ಥ್ಯೇ | ಛಾಯಾತಪೋವದನ್ತಿ ಪಂಚಾಗ್ನಯೇ ಯೋಚತ್ರಿಣಾಚಿಕೇತಾಃ’ ಎಂದು ಹೇಳಿರುವುದರಿಂದ -
ಋತಂ ಪಿಪಂತೌ ಎಂದು ದ್ವಿವಚನದಿಂದ ಇಬ್ಬರನ್ನು ಕರ್ಮಫಲ ಭೋಕ್ತಾರಾಗಿ ಹೇಳಿರುವುದರಿಂದ ಜೀವನೂ ಮತ್ತು ಪ್ರಾಣನೂ ಹೇಳಲ್ಪಟ್ಟಿತು
ಪರಮಾತ್ಮನಿಗೆ ಕರ್ಮಫಲ ಭೋಕ್ತೃತೆಯು ಇಲ್ಲವು.
ಸಂಶಯ - ಇಲ್ಲಿ
ಅತ್ತಾ
ಎಂದು ಹೇಳಲ್ಪಟ್ಟಿರುವನು
ಜೀವಾತ್ಮನೋ ?
ಅಥವಾ ಪರಮಾತ್ಮನೋ?
ವಿಷಯ - : :
ಕಠವಲ್ಲಿಯಲ್ಲಿ (೧.೨.೨೫) -
’ಯಸ್ಯಚ ಬ್ರಹ್ಮ ಚ ಕ್ಷತ್ರಂ ಚ ಉಭೇಭವತಿ ಓದನಃ ಮೃತ್ಯುರ್ಯಸ್ಯೋಪಸೇಚನಂ ಕ ಇತ್ಥಾ ವೇದ ಯತ್ರಸಃ’
ಆರ್ಥ - ಯಾವನಿಗೆ ಬ್ರಾಹ್ಮಣ ಕ್ಷತ್ರಿಯವರ್ಗವೆರಡೂ ಭುಜಿಸುವ ಅನ್ನವೋ, ಅದಕ್ಕೆ ರುಚಿಯಾಗಿರುವದಕ್ಕೆ ಮೃತ್ಯುವು ಶಾಕರೂಪ ವ್ಯಂಜನವೋ, ಇಂತಹ ಮಹನೀಯನನ್ನು ಯಾರು ತಾನೇ ಚನ್ನಾಗಿ ತಿಳಿಯುವರು, ಯಾರೂ ಇಲ್ಲವೆಂಬ ಭಾವವು.
ಇಲ್ಲಿ ’ಬ್ರಹ್ಮ ಕ್ಷತ್ರ’ ಶಬ್ದದಿಂದ ಸರ್ವ ಚರಾಚರತ್ವವು ಹೇಳಲ್ಪಟ್ಟಿತು.
’ಓದನ ಉಪಸೇಚನ’ ಶಬ್ದದಿಂದ ಪ್ರಳಯದಲ್ಲಿ ಎಲ್ಲವನ್ನೂ ನಾಶಗೊಳಿಸುವುದು ಹೇಳಲ್ಪಟ್ಟಿತು.