Please enable JavaScript.
Coggle requires JavaScript to display documents.
ದಹರಾಧಿಕರಣಮ್ (ಸೂತ್ರಗಳು - 1.3.13 - 1.3.23 (1.3.13 ದಹರ ಉತ್ತರೇಭ್ಯಃ, 1.3.14 ಗತಿ…
ದಹರಾಧಿಕರಣಮ್
-
ಸಿದ್ಧಾಂತ - ಪರಬ್ರಹ್ಮನು
- ಸೂ.1.3.13 ಮುಂದೆ ವಾಕ್ಯಗಳಲ್ಲಿ ಅರಬ್ರಹ್ಮ ಧರ್ಮಗಳನ್ನು ಹೇಳುತ್ತವೆ ಆದುದರಿಂದ -
ಏತತ್ಸತ್ಯಂ ಬ್ರಹ್ಮ ಪುರಮ್ ಎಂದು ದಹರಾಕಾಶನಿಗೆ ಅತಿಮಹತ್ವ, ಸರ್ವಾಶ್ರಯತ್ವ, ಅಜರತ್ವ, ಸತ್ಯತ್ವಾದಿಗಳನ್ನು ಹೇಳಿ
-
ಆದುದರಿಂದ ಈ ದಹರಾಕಾಶಶಬ್ದ ವಾಚ್ಯನು ಅಪಹತ ಪಾಪ್ಮತ್ವಾದಿ ಗುಣವಿಶಿಷ್ಟನಾದ ಪರಮಾತ್ಮನೇ ಎಂದು ನಿಶ್ಚಯಿಸಬೇಕಾಗಿದೆ. ಪಂಚ ಭೂತಾಕಾಶವಲ್ಲವು.
- ಜೀವಾತ್ಮನು ಕರ್ಮಪರವಶತ್ವದಿಂದ ಜಾಗರ ಸ್ವಪ್ನ ಸುಶುಪ್ತ್ಯಾದಿಗಳಾದ ಅಪಹತ ಪಾಪ್ಮತ್ವಾದಿಗಳು ತಿರೋಹಿತವಾಗಿದ್ದುದು ದಹರ ಬ್ರಹ್ಮವಿದ್ಯಾರೂಪವಾದ ಉಪಾಯಾನುಶ್ಠಾನ ಮಾಡಿ ಸರ್ವೇಶ್ವರನ ಅನುಗ್ರಹವನ್ನು ಹೊಂದಿದವನಾಗಿ ಪುನಃ ಆವಿರ್ಭವಿಸಲ್ಪಟ್ಟ ಆಗುಣಾಷ್ಟಕಗಳನ್ನು ಹೊಂದುವನು
ದಹರಾಕಾಶನಾದರೋ ಕರ್ಮ ಸಂಬಂಧವಿಲ್ಲದವನಾದುದರಿಂದ ಈ ಅಪಹತ ಪಾಪ್ಮತ್ವಾದಿಗಳು ಎಂದಿಗೂ ತಿರೋಹಿತವಿಲ್ಲದೆ ನಿರುಪಾಧಿಕವಾಗಿರುವುದರಿಂದ
-
-
- ಸೂ 1.3.14 ಇದೇ ಛಾಂದೋಗ್ಯ ಶ್ರುತಿಯಲ್ಲಿ ಗತಿಯೂ, "ಬ್ರಹ್ಮಲೋಕ" ವೆಂಬ ಶಬ್ದವೂ ಎರಡೂ ಇರುವುದರಿಂದಲೂ ದಹರಾಕಾಶನು ಪರಬ್ರಹ್ಮವೆಂದೇ ನಿಶ್ಚಯಿಸಬೇಕಾಗಿದೆ.
ಛಾಂ 8.3.2 ರಲ್ಲಿ -
ತದ್ಯಥಾ ಹಿರಣ್ಯ ನಿಧಿಂ ವಿಹಿತಮ್ ಅಕ್ಷೇತ್ರಜ್ಞಾ ಉಪರ್ಯುಪರಿ ಸಞ್ಚರನ್ತೋ ನವಿನ್ದೇಯುರೇವ ಮೇವ ಇಮಾಸ್ಸರ್ವಾಪ್ರಜಾ ಅಹರಹರ್ಗಚ್ಛನ್ತ್ಯ ಏತಂ ಬ್ರಹ್ಮಲೋಕಂ ನ ವಿನ್ದ್ಯತ್ಯನೃತೇನ ಹಿ ಪ್ರತ್ಯೂಡಾಃ
ಅರ್ಥ -
ಕಣ್ಣಿಗೆ ಕಾಣದ ಹಾಗೆ ನೆಲದಲ್ಲಿ ಬಚ್ಚಿಟ್ಟ ನಿಧಿಯನ್ನು ಕ್ಷೇತ್ರಜ್ಞ ಸ್ವರೂಪವಾದ ಜ್ಞಾನವನ್ನು ಹೊಂದದವರು ಪ್ರತಿದಿನವೂ ಅದರ ಮೇಲೆಯೇ ದಾಟಿಕೊಂಡು ಸಂಚರಿಸುವವರಾಗಿ ಹಿರಣ್ಯ ನಿಧಿ ಇದೆ ಎಂದು ಹೇಗೆ ತಿಳಿಯಲಾರರೋ
-
-
- ಸೂ 1.3.15 ಧೃತಿ ಶಬ್ದದಿಂದ ಹೇಳಲ್ಪಡುವ ಪರಮಾತ್ಮನ ಸಙ್ಕಲ್ಪ ಮಾತ್ರದಿಂದಲೇ ಧರಿಸಿ ನಿಯಮಿಸುವ ಮಹಿಮೆಯಿಂದಲೂ ದಹರಾಕಾಶನು ಪರಮಾತ್ಮನೇ
-
-
- ಸೂ 1.3.16 ಅಪಹತ ಪಾಪ್ಮತ್ವಾದಿ ಗುಣ ವಿಶೇಷವುಳ್ಳವನೆಂಬ ಪ್ರಸಿದ್ಧಿಯು ಈ ದಹರಾಕಾಶನಲ್ಲಿ ತೋರುವುದರಿಂದಲೂ, ದಹರಾಕಾಶನು ಪರಬ್ರಹ್ಮನೇ
-
-
ಆದುದರಿಂದ ಭೂತಾಕಾಶಕ್ಕಿಂತಲೂ ಪರಮಾತ್ಮನ ಧರ್ಮಗಳ ಪ್ರಸಿದ್ಧಿಯು ದಹರಾಕಾಶನಲ್ಲಿ ಹೇಳಿರುವುದರಿಂದ ಪರಬ್ರಹ್ಮನೇ ಹೇಳಲ್ಪಟ್ಟನು
- ಸೂ 1.3.17 ಮೇಲೆ ಹೇಳಿದ ಎಲ್ಲಾ ಗುಣಗಳು ಜೀವನಲ್ಲಿ ಯಾವಾಗಲೂ ಇರುವುದಿಲ್ಲವಾದುದರಿಂದ ದಹರಾಕಾಶ ಶಬ್ದವಾಚ್ಯನು ಪರಮಾತ್ಮನೆ
ಸೂ 1.3.18 ಜಾಗರ-ಸ್ವಪ್ನ-ಅವಸ್ಥೆಗಳಲ್ಲಿ ಮಾಡಿದ ಪುಣ್ಯ ಪಾಪ ರೂಪ ಕರ್ಮಗಳಿಂದ ಅನಾದಿ ಕಾಲದಿಂದ ತಿರೋಹಿತ ಗುಣಗಳುಳ್ಳವನಾದ ಜೀವಾತ್ಮಾ ಸರ್ವೇಶ್ವರನ ಕಾರುಣ್ಯದಿಂದ ಆವಿರ್ಭವಿಸಲ್ಪಟ್ಟ ಸ್ವರೂಪ ವುಳ್ಳವನೆಂದು ಶ್ರುತಿಯು ಹೇಳುತ್ತದೆ.
-
- ಸೂ 1.3.19 ಜೀವಾತ್ಮನ ವಿಷಯವಾಗಿ ಹೇಳಿರುವುದು ದಹರಾಕಾಶನಿಗೆ ಜಗದ್ವಿಧರಣಶಕಿ ವೈಲಕ್ಷಣ್ಯ ಹೇಳಿದ ಹಾಗೆ ;
ಜೀವನಿಗೆ ಅನಾದಿಕರ್ಮದಿಂದ ತಿರೋಹಿತವಾದ ಸ್ವರೂಪವು ಆವಿರ್ಭವಿಸುತ್ತದೆಂದು ಹೇಳುವ ಸಂಭವ ಉಂಟಾಗಿ ಜೀವನಿಗೂ ವೈಲಕ್ಷಣ್ಯ ಉಂಟಾಗುತ್ತದೆಂದು ಹೇಳುವುದಕ್ಕಾಗಿ ಜೀವ ಪರಾಮರ್ಶೆಯು
- ಸೂ 1.3.20 ಉಪಾಸಕನ ಅನುಗ್ರಹಾರ್ಥವಾಗಿ ಅಂಗುಷ್ಠ ಮಾತ್ರ ಪ್ರಮಿತಿಯುಳ್ಳವನಾಗಿ ಹೃದಯ ಗುಹೆಯಲ್ಲಿ ದಹರತ್ವವನ್ನು ಎಂದರೆ ಅಲ್ಪ ಪರಿಮಾಣತ್ವವನ್ನು ಈ ಆಕಾಶನು ಹೊಂದಿರುತ್ತಾನೆ
- ಸೂ 1.3.21 ಸ್ವಾಭಾವಿಕ ಅಪಹತ ಪಾಪ್ಮತ್ವಾದಿ ಗುಣಗಳುಳ್ಳ ದಹರಾಕಾಶನನ್ನು ಅನುಸರಿಸಿ ಸಾಮ್ಯಾಪತ್ತಿಯು ಆತನ ಕೃಪೆಯಿಂದ ಉಂಟಾಗುವುದರಿಂದಲೂ ಜೀವಾತ್ಮನು ದಹರಾಕಾಶನಲ್ಲವು
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ | ತದಾ ವಿದ್ವಾನ್ ಪುಣ್ಯ ಪಾಪೇ ವಿಧೂಯ ನಿರಂಜನಃ ಪರಮಂ ಸಾಮ್ಯಮುಪೈತಿ ಮುಂ 1.3
ಸ್ವಾಮಿಯ ಕೃಪೆಯಿಂದ ಉಪಾಯಾನುಷ್ಠಾನಮಾಡಿದ ಉಪಾಸಕನು ಬಂಧ ನಿರ್ಮುಕ್ತನಾಗಿ ಅಪಕತ ಪಾಪ್ಮತ್ವಾದಿ ಗುಣಗಳನ್ನು ಹೊಂದವನೆಂದು ಶ್ರುತಿಯು ಹೇಳುತ್ತದೆ.
- ಸೂ 1.3.22 ಸಂಸಾರಿಯು ದಹರಾಕಾಶನಾದ ಪರಬ್ರಹ್ಮನಿಗೆ ಸಮಾನವಾದ ಎಂದರೆ, ಆತನೊಂದಿಗೆ ಆತನ ಕೃಪೆಯಿಂದ ಸಾಮ್ಯಾಪತ್ತಿಯು ಕೂಡ ಸ್ಮೃತಿಯಾದ ಭಗವದ್ಗೀತೆಯಲ್ಲಿ ಹೇಳಲ್ಪಟ್ಟಿದೆ -
-
-
ಪೂರ್ವಪಕ್ಷ -
- ಭೂತಾಕಾಶ; ಏಕೆಂದರೆ ಆಕಾಶ ಶಬ್ದಕ್ಕೆ ಸಾಧಾರಣವಾಗಿ ಭೂತಾಕಾಶವೆಂಬುದೇ ಅರ್ಥವು
-
ಮತ್ತು ಪ್ರಜಾಪತಿ ವಾಕ್ಯದಿಂದ ಜೀವಾತ್ಮನೂ ಅಪಹತ ಪಾಪ್ಮತ್ವಾದಿ ಗುಣಗಳುಳ್ಳವನಾಗುವನೆಂದು ತೋರಿಬರುವುದರಿಂದ ದಹರಾಕಾಶನು ಜೀವಾತ್ಮನಿರಬಹುದು
-
-
-
-
-