Please enable JavaScript.
Coggle requires JavaScript to display documents.
ಆನಂದಮಯಾಧಿಕರಣ (ಸಙ್ಗತಿ (ಪ್ರಧಾನವೇ ಜಗತ್ಕಾರಣವೆಂದು ಕೆಲವರು ಹೇಳುವುದನ್ನು ಖಂಡಿಸಿ…
ಆನಂದಮಯಾಧಿಕರಣ
ಸಙ್ಗತಿ
ಪ್ರಧಾನವೇ ಜಗತ್ಕಾರಣವೆಂದು ಕೆಲವರು ಹೇಳುವುದನ್ನು ಖಂಡಿಸಿ ಜಡವಾದ ಪ್ರಕೃತಿ ಜಗತ್ಕಾರಣವಾಗಲಾರದೆಂದು ಸಿದ್ಧಾನ್ತಿಸಿದ್ದಾಯೆತು.
ಮುಂದೆ ಜೀವಾತ್ಮನು ಜಗತ್ಕಾರಣನೇ ಎಂಬುದು ವಿಚಾರಿಸಲ್ಪಟ್ಟು, ’ಆನಂದಮಯಃ’ - ಆನಂದಮಯನೆಂದು ಶ್ರುತಿಯಲ್ಲಿ ಹೇಳಲ್ಪಟ್ಟಿರುವವನು ಪರಮ ಪುರುಷನೇ ವಿನಾ, ಕರ್ಮವಶ್ಯರಾಗಿ ಅಚಿತ್ಸಂಬಂಧವಿರುವ ಚತುರ್ಮುಖಾದಿ ಜೀವಾತ್ಮರಲ್ಲವು ಎಂದು ಸ್ಥಾಪಿಸಲ್ಪಡುತ್ತದೆ.
ಅಭ್ಯಾಸಾತ್ - ’ಸ ಏಕೋ ಮಾನುಷ ಆನಂದಃ’ ಎಂಬಲ್ಲಿ ಮನುಷ್ಯಾನಂದವೆಂತಾದ್ದೆಂದು ಹೇಳಿ, ಅದರ ನೂರರಷ್ಟು ಮನುಷ್ಯ ಗಂಧರ್ವರಾನಂದವೆಂದೂ, ಅದರ ನೂರರಷ್ಟು ದೇವ ಗಂಧರ್ವರ ಆನಂದವೆಂದೂ ಹೀಗೆ ಹೇಳುತ್ತಾ ಚತುರ್ಮುಖನ ಆನಂದವನ್ನು ಹೇಳಿ, ಅದರ ನೂರರಷ್ಟು ’ಸ ಏಕೋ ಬ್ರಹ್ಮಣ ಆನಂದ’ ವಾಗಬಹುದೆಂದು ಹೇಳಿ, ಆದುದರಿಂದ ಪರಬ್ರಹ್ಮಾನಂದವಿಷ್ಟೆಂದು ಹೇಳಲು ಸಾಧ್ಯವಿಲ್ಲವು ಎಂದು ’ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’ ಎಂದು ಹೇಳಿ ಶ್ರುತಿಯು ವಿರಾಮವನ್ನು ಹೊಂದಿತು.
-
ಸಿದ್ಧಾಂತ
-
ಯುಕ್ತಿಗಳು
-
ಆ ತೈತ್ತರೀಯದಲ್ಲಿಯೇ
-
ನಿರತಿಶಯವಾಗಿ ಒಂದಕ್ಕಿಂತ ಇನ್ನೊಂದು ನೂರರಷ್ಟು ಹೆಚ್ಚಾದುದು ಎಂದು ೧೦ ಸಲ ಗುಣಿಸಿ ಆವೃತ್ತಿ ಹೊಂದಿರುವ ಆನಂದವು ಪ್ರತ್ಯಗಾತ್ಮನಿಗಿಂತ ಬೇರೆಯಾದ ಪರಮಾತ್ಮನದು ಎಂದು ನಿಶ್ಚಯಿಸಲ್ಪಟ್ಟಿರುತ್ತದೆ.
-
-
ಎಲ್ಲವೂ (ಚಿತ್ ಅಚಿತ್ತುಗಳೆರಡೂ) ಪರಮಾತ್ಮನಿಗೆ ಶರೀರವಾಗಿ ಆತನು ಅವುಗಳಿಗೆ ಆತ್ಮಾವಾಗಿರುವುದು ಯುಕ್ತವಾದುದೇ,
-
-
-
ಆದರೆ ಆನಂದಮಯನ ವಿಷಯದಲ್ಲಾದರೋ ಬೇರೆ ಯಾರೂ ಶಾರೀರ ಆತ್ಮಾ ಎಂದು ಹೇಳದಿರುವುದರಿಂದ ಅನ್ನಮಯನು ಪರಬ್ರಹ್ಮನೇ ಎಂಬುದು ಸಿದ್ಧಾನ್ತವು.
ವಿಷಯ
ತೈತ್ತರೀಯದಲ್ಲಿ ’ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಸ್ಸಂಭೂತಃ (ತೈ.ಆ.೧)’ (ಈ ಪರಮಾತ್ಮನಿಂದ ಆಕಾಶವು ಉಂಟಾಯಿತು) ಎಂದು ಪ್ರಾರಂಭಿಸಿ
ಆನಂತರ ’ತಸ್ಮಾದ್ವಾ ಏತಸ್ಮಾದ್ವಿಜ್ಞಾನ ಮಯಾತ್ ಅನ್ಯೋನ್ತರ ಆತ್ಮಾನಂದ ಮಯಃ’ ಈ ವಿಜ್ಞಾನಮಯನಾದ ಜೀವಾತ್ಮನಿಗಿಂತ ಬೇರೆ ಆನಂದಮಯನಾದ ಪರಮಾತ್ಮನು
-
-